ದೇಶ

ಹಿರಿಯ ಕಾಂಗ್ರೆಸ್ ನಾಯಕ ಎನ್ ಡಿ ತಿವಾರಿ ಬಿಜೆಪಿಗೆ ಸೇರ್ಪಡೆ

Srinivas Rao BV
ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರಾಜ್ಯಪಾಲ ಎನ್ ಡಿ ತಿವಾರಿ(91) ಜ.18 ರಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ. 
ತಿವಾರಿ ಅವರೊಂದಿಗೆ ಅವರ ಪುತ್ರ ರೋಹಿತ್ ಶೇಖರ್ ಸಹ ಬಿಜೆಪಿ ಸೇರ್ಪಡೆಯಾಗಿದ್ದು, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ ನ ಮುಖ್ಯಮಂತ್ರಿಯಾಗಿದ್ದ ಏಕೈಕ ರಾಜಕೀಯ ನಾಯಕನಾಗಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸಚಿವ ಸಂಪುಟದಲ್ಲಿ ವಿದೇಶಾಂಗ ಇಲಾಖೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 
ನಂತರ 2007 ರಿಂದ 2009 ರವರೆಗೂ ಆಂಧ್ರಪ್ರದೆಶದ ರಾಜ್ಯಪಾಲರಾಗಿಯೂ ಎನ್ ಡಿ ತಿವಾರಿ ಕಾರ್ಯನಿರ್ವಹಿಸಿದ್ದರು. 
SCROLL FOR NEXT