ಅಮರಾವತಿ; ಜಲ್ಲಿಕಟ್ಟು ಮತ್ತು ಕೋಳಿ ಪಂದ್ಯದ ಮೇಲೆ ನಿಷೇಧ ಹೇರಿರುವುದು ದ್ರಾವಿಡಿಯನ್ ಸಂಸ್ಕೃತಿ ಹಾಗೂ ಸಮಗ್ರತೆ ಮೇಲೆ ದಾಳಿ ನಡೆಸಿದಂತೆ ಎಂದು ಹೇಳುವ ಮೂಲಕ ನಟ ಪವನ್ ಕಲ್ಯಾಣ್ ಜಲ್ಲಿಕಟ್ಟಿಗೆ ಬೆಂಬಲ ಸೂಚಿಸಿದ್ದಾರೆ.
ನನಗೆ ನಮ್ಮ ಸಂಸ್ಕೃತಿ, ಪ್ರಾಣಿಗಳು ತಾಯಿ ಹಾಗೂ ಪ್ರಕೃತಿ ಬಗ್ಗೆ ತುಂಬಾ ಹೆಚ್ಚಿನ ಗೌರವ ಆದರವಿದೆ. ನನ್ನ ಫಾರಂ ನಲ್ಲಿರುವ ಹಸು ಹಾಗೂ ಕೋಳಿಗಳನ್ನು ನೋಡಿದಾಗ ನನಗೆ ಜಲ್ಲಿಕಟ್ಟು ಮತ್ತು ಕೋಳಿ ಕಾಳಗಗಳ ಬಗ್ಗೆ ಯೋಚಿಸುವಂತೆ ಮಾಡಿತು ಎಂದು ಟ್ವೀಟ್ ಮಾಡಿದ್ದಾರೆ.
ಕೆಲವೊಮ್ಮೆ ಸಮಾಜಕ್ಕಾಗಿ ನಾವು ನಮ್ಮ ನೀತಿಭೋದನೆಯ ಹುಚ್ಚುತನವನ್ನು ಬಿಡಬೇಕಾಗುತ್ತದೆ, ಇಲ್ಲವಾದರೆ ನಮ್ಮ ದೇಶದ ಏಕತೆಗೆ ಧಕ್ಕೆ ಉಂಟಾಗುತ್ತದೆ, ಹೀಗಾಗಿ ಕೇಂದ್ರ ಸರ್ಕಾರ ಜಲ್ಲಿಕಟ್ಟು ಮತ್ತು ಕೋಳಿ ಪಂದ್ಯಗಳ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸಬೇಕು ಎಂದು ಪವನ್ ಕಲ್ಯಾಣ್ ಆಗ್ರಹಿಸಿದ್ದಾರೆ. ಜಲ್ಲಿಕಟ್ಟು ಮತ್ತು ಕೋಳಿ ಪಂದ್ಯಗಳ ನಿಷೇಧ ದಕ್ಷಿಣ ಭಾರತದ ಜನತೆಗೆ ನೋವುಂಟು ಮಾಡಿದೆ ಎಂದು ಪವನ್ ಟ್ವೀಟ್ ಮಾಡಿದ್ದಾರೆ.