ಗಡಿಪಾರಾಗಿರುವ ಟಿಬೆಟಿಯನ್ನರಿಗೆ ಟ್ರಂಪ್ ಹೊಸ ಆಶಾಕಿರಣ, ಟಿಬೆಟ್ ವಿವಾದ ಬಗೆಹರಿಸುವ ಭರವಸೆ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಟಿಬೆಟಿಯನ್ನರ ಸ್ವಾಯತ್ತತೆಯ ಭರವಸೆ ಮತ್ತಷ್ಟು ಹೆಚ್ಚಿದೆ.
ಧರ್ಮಶಾಲಾ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಟಿಬೆಟಿಯನ್ನರ ಸ್ವಾಯತ್ತತೆಯ ಭರವಸೆ ಮತ್ತಷ್ಟು ಹೆಚ್ಚಿದೆ. ಚೀನಾ-ಟಿಬೆಟ್ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆಗೆ ಟ್ರಂಪ್ ಉತ್ತೇಜನ ನೀಡಲಿದ್ದಾರೆ ಎಂದು ಟಿಬೆಟ್ ನ ಗಡಿಪಾರಾಗಿರುವ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.
ಅಮೆರಿಕದ 45 ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಟಿಬೆಟ್ ಸರ್ಕಾರದ ಸಭಾಧ್ಯಕ್ಷರು, ಈ ಹಿಂದಿನ ಅಮೆರಿಕ ಅಧ್ಯಕ್ಷರುಗಳು ಟಿಬೆಟ್ ನ ಧರ್ಮಗುರು ದಲೈ ಲಾಮ ಅವರನ್ನು ಭೇಟಿ ಮಾಡಿ ಚೀನಾ-ಟಿಬೆಟ್ ಮಾತುಕತೆಯನ್ನು ಬೆಂಬಲಿಸಿದ್ದರು. ಅಂತೆಯೇ ನಿಮ್ಮ ಅಧ್ಯಕ್ಷೀಯ ಅವಧಿಯಲ್ಲೂ ಅಮೆರಿಕ ಚೀನಾದೊಂದಿಗಿನ ಟಿಬೆಟ್ ವಿವಾದವನ್ನು ಬಗೆಹರಿಸುವುದಕ್ಕೆ ಬೆಂಬಲ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ಟ್ರಂಪ್ ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಟಿಬೆಟ್ ನಲ್ಲಿ ಚೀನಾದ ಆಡಳಿತವನ್ನು ವಿರೋಧಿಸಿ 2009 ರಿಂದ ಈ ವರೆಗೆ 149 ಟಿಬೆಟಿಯನ್ನರ ಆತ್ಮಾಹುತಿಯಾಗಿದೆ ಎಂದು ಟಿಬೆಟ್ ಸರ್ಕಾರದ ಸ್ಪೀಕರ್ ಟ್ರಂಪ್ ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.