ಚಂಡೀಗಢ:ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ಪಂಜಾಬ್ ನಲ್ಲಿ ಪೊಲೀಸರು ಸುಮಾರು 12 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ.
ಇದರ ಹೊರತಾಗಿ 5 ಕೋಟಿ 90 ಲಕ್ಷ ರೂಪಾಯಿ ನಗದು, 26 ಕೋಟಿ ರೂಪಾಯಿ ಬೆಲೆಬಾಳುವ ಚಿನ್ನ ಮತ್ತು 2.5 ಕೋಟಿ ರೂಪಾಯಿಗಳಷ್ಟು ಬೆಲೆಬಾಳುವ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ 1061 ನೊಟೀಸ್ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಣ್ಗಾವಲು ಇರಿಸಲು 487 ಕ್ಷಿಪ್ರ ತಂಡ ಮತ್ತು 506 ತಂಡಗಳು ಕೆಲಸ ಮಾಡುತ್ತಿವೆ. ಇಲ್ಲಿಯವರೆಗೆ 12,792 ದೂರುಗಳನ್ನು ಸ್ವೀಕರಿಸಲಾಗಿದ್ದು ಅವುಗಳಲ್ಲಿ 12,119 ದೂರುಗಳನ್ನು ಬಗೆಹರಿಸಲಾಗಿದೆ. ಪಾವತಿ ಸುದ್ದಿಗಳ 50 ಕೇಸುಗಳು ಬಂದಿದ್ದು ಅವುಗಳಲ್ಲಿ 19 ಕೇಸುಗಳು ದೃಢಪಟ್ಟಿವೆ. 7 ಕೇಸುಗಳು ತಿರಸ್ಕೃತಗೊಂಡಿವೆ ಮತ್ತು 24 ಕೇಸುಗಳು ಪರಿಗಣನೆಯ ಹಂತದಲ್ಲಿವೆ.
ಪಂಜಾಬ್ ಚುನಾವಣೆಯಲ್ಲಿ ಮಾದಕ ವಸ್ತುಗಳ ಹಾವಳಿಯ ಮತ್ತು ಅದನ್ನು ತಡೆಗಟ್ಟುವುದು ಪಕ್ಷಗಳ ಚುನಾವಣಾ ವಿಷಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics