ದೇಶ

ಮುಸ್ಲಿಂ ಪ್ರಜೆಗಳಿಗೆ ನಿರ್ಬಂಧದ ಟ್ರಂಪ್ ಆದೇಶಕ್ಕೆ ಫೆಡರಲ್ ಕೋರ್ಟ್ ತಡೆ!

Srinivas Rao BV
ನ್ಯೂಯಾರ್ಕ್: ಇಸ್ಲಾಮಿಕ್ ರಾಷ್ಟ್ರಗಳಿಂದ ಅಮೆರಿಕಾಗೆ ವಲಸೆ ಬರುವವರಿಗೆ ನಿರ್ಬಂಧ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ಅಮೆರಿಕಾದ ಫೆಡರಲ್ ನ್ಯಾಯಾಧೀಶರೊಬ್ಬರು ತಡೆ ನೀಡಿದ್ದಾರೆ. 
ಡೊನಾಲ್ಡ್ ಟ್ರಂಪ್ ಅವರ ಆದೇಶದ ನಂತರ ಅಮೆರಿಕಾಗೆ ಬಂದಿದ್ದ ನಿರಾಶ್ರಿತರು, ಪ್ರಯಾಣಿಕರು ಅಮೆರಿಕಾದ ವಿಮಾನ ನಿಲ್ದಾಣದಲ್ಲೇ ಸಿಲುಕಿಕೊಳ್ಳಬೇಕಾದ ಸ್ಥಿತಿ ಎದುರಾಗಿತ್ತು. ಈ ಬೆಳೆವಣಿಗೆಗಳ ನಂತರ ಅಮೆರಿಕದ ಫೆಡರಲ್ ಕೋರ್ಟ್ ನ ನ್ಯಾಯಾಧೀಶರು ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ತಡೆ ನೀಡಿದ್ದಾರೆ. 
ಕೋರ್ಟ್ ಟ್ರಂಪ್ ಆದೇಶಕ್ಕೆ ತಡೆ ನೀಡುತ್ತಿದ್ದಂತೆಯೇ ಅಮೆರಿಕ ಸಿವಿಲ್ ಲಿಬರ್ಟೀಸ್ ಯೂನಿಯನ್(ಎಸಿಎಲ್ ಯು) ಸಂಘಟನೆ ವಿಜಯೋತ್ಸವ ಆಚರಿಸಿದೆ. ಡೊನಾಲ್ಡ್ ಟ್ರಂಪ್ ಆದೇಶದ ವಿರುದ್ಧ ಇದೇ ಅಮೆರಿಕ ಸಿವಿಲ್ ಲಿಬರ್ಟೀಸ್ ಯೂನಿಯನ್ ಕೋರ್ಟ್ ಮೊರೆ ಹೋಗಿತ್ತು. ಸರ್ಕಾರದ ಸಾಂವಿಧಾನಿಕ ವಿರೋಧಿ ನಿರ್ಧಾರಗಳ, ನೀತಿಗಳಿಗೆ ಅಂಕುಶ ಹಾಕುವ ನಿಟ್ಟಿನಲ್ಲಿ ನ್ಯಾಯಾಲಯ ಕಾರ್ಯನಿರ್ವಹಿಸಿದೆ ಎಂದು ಅಮೆರಿಕಾದ ಸಿವಿಲ್ ಲಿಬರ್ಟೀಸ್ ಯೂನಿಯನ್ ಸಂತಸ ವ್ಯಕ್ತಪಡಿಸಿದೆ. 
SCROLL FOR NEXT