ದೆಹಲಿ ಪೊಲೀಸರಿಂದ ಕಿರುಕುಳ; ನಾಪತ್ತೆಯಾಗಿರುವ ಜೆಎನ್ ಯು ವಿದ್ಯಾರ್ಥಿ ನಜೀಬ್ ಪೋಷಕರ ಆರೋಪ
ದೆಹಲಿ ಪೊಲೀಸರು ನಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ನಾಪತ್ತೆಯಾಗಿರುವ ಜೆಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್...
ನವದೆಹಲಿ: ದೆಹಲಿ ಪೊಲೀಸರು ನಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ನಾಪತ್ತೆಯಾಗಿರುವ ಜೆಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಕುಟುಂಬ ಆರೋಪಿಸಿದೆ.
ಇಂದು ಬೆಳಗ್ಗೆ 4 ಗಂಟೆಗೆ ಬದೌನ್ ನಲ್ಲಿರುವ ನಮ್ಮ ಮನೆಗೆ ಸುಮಾರು 50 ಪೊಲೀಸ್ ಸಿಬ್ಬಂದಿ ಶೋಧದ ನೆಪದಲ್ಲಿ ಬಲವಂತವಾಗಿ ಮನೆಗೆ ನುಗ್ಗಿದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮನೆಗೆ ಬಂದ ಪೊಲೀಸರು ಮನೆಯ ಒಳಗಡೆ ಫೋಟೋ ತೆಗೆದು ವಿಡಿಯೋ ಮಾಡಿದ್ದಾರೆ. ಮನೆಯ ಪ್ರತಿಯೊಂದು ಸ್ಥಳವನ್ನು ಪರಿಶೀಲಿಸಿ, ಮನೆಯ ಸದಸ್ಯರಿಗೆ ನಜೀಬ್ ಎಲ್ಲಿದ್ದಾನೆ ಎಂದು ಹೇಳಬೇಕೆಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ನಜೀಬ್ ನ 90 ವರ್ಷದ ಅಜ್ಜನಿಗೂ ಕೂಡ ಅವರುಕಿರುಕುಳ ನೀಡಿದ್ದಾರೆ. ಆದರೆ ದೆಹಲಿ ಪೊಲೀಸರು ಈ ಹೇಳಿಕೆಯನ್ನು ನಿರಾಕರಿಸಿದ್ದಾರೆ.
ನಜೀಬ್ ನಾಪತ್ತೆ ಸಂಬಂಧ ಶೋಧ ಕಾರ್ಯ ಮುಂದುವರಿದಿದೆ. ಆತನ ಸಂಬಂಧಿಕರು ಮತ್ತು ಸ್ನೇಹಿತರಿಗೆ ನೊಟೀಸ್ ನೀಡಿ ಅವರ ಮನೆಗಳಿಲ್ಲಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇಲಾಖೆಯ ಪ್ರಕ್ರಿಯೆಯಂತೆ ವಿಡಿಯೋ ರೆಕಾರ್ಡ್ ಮಾಡಲಾಗಿದೆ, ನಜೀಬ್ ಪೋಷಕರು ಆರೋಪ ಆಧಾರರಹಿತವಾದದ್ದು ಎಂದು ಪೊಲೀಸರು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.