ದೇಶ

ದೆಹಲಿ ನೂತನ ಪೊಲೀಸ್ ಆಯುಕ್ತರಾಗಿ ಅಮೂಲ್ಯ ಪಟ್ನಾಯಕ್ ನೇಮಕ

Lingaraj Badiger
ನವದೆಹಲಿ: ದೆಹಲಿ ಸರ್ಕಾರ ದೆಹಲಿಯ ಮುಂದಿನ ಪೊಲೀಸ್ ಆಯುಕ್ತರನ್ನಾಗಿ ಅಮೂಲ್ಯ ಪಟ್ನಾಯಕ್ ಅವರನ್ನು ನೇಮಕ ಮಾಡಿದೆ.
ಮೂಲತ ಒಡಿಶಾದವರಾದ ಅಮೂಲ್ಯ ಅವರು ಎಜಿಎಂಯುಟಿ ಕೆಡರ್ ನ ಐಪಿಎಸ್ ಅಧಿಕಾರಿಯಾಗಿದ್ದು, ದೆಹಲಿಯ ಆಡಳಿತ ವಿಭಾಗದ ವಿಶೇಷ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ಜಂಟಿ ಆಯುಕ್ತರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ವರ್ಮಾ ಅವರ ಸ್ಥಾನಕ್ಕೆ ಅಮೂಲ್ಯ ಪಾಟ್ನಾಯಕ್ ಅವರು ನೇಮಕ ಮಾಡಲಾಗಿದೆ.
ಇತ್ತಿಚೀಗಷ್ಟೆ ಲೋಕ್ ವರ್ಮಾ ಅವರು ಸಿಬಿಐ ಮುಖ್ಯಸ್ಥರಾಗಿ ನೇಮಕಗೊಂಡಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಅಮೂಲ್ಯ ಪಟ್ನಾಯಕ್ ಅವರನ್ನು ನೇಮಕ ಮಾಡಲಾಗಿದೆ.
SCROLL FOR NEXT