ಮುಜಾಫರ್ ನಗರ: ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಬಿಜೆಪಿ ವಿವಾದಾತ್ಮಾಕ ಶಾಸಕ ಸುರೇಶ್ ರಾಣಾ ವಿರುದ್ಧ ಮತ್ತೆ ದೂರು ದಾಖಲಾಗಿದೆ.
ಈ ಮೊದಲು ತಾವು ಮತ್ತೆ ಶಾಸಕರಾಗಿ ಆಯ್ಕೆಯಾಗಿ ಬಂದರೆ ಕೈರಾಣಾದಲ್ಲಿ ಸದ್ ಕರ್ಫ್ಯೂ ಜಾರಿಗೆ ತರುತ್ತೇನೆ ಎಂದು ಹೇಳಿ ವಿವಾದಕ್ಕೀಡಾಗಿದ್ದ ಸುರೇಶ್ ರಾಣಾ ವಿರುದ್ಧ ಶಮ್ಲಿ ಜಿಲ್ಲೆಯ ಗೊಹೆಪುರ್ ಗ್ರಾಮದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ದೂರು ದಾಖಲಿಸಲಾಗಿದೆ.
ಉತ್ತರ ಪ್ರದೇಶದ ಥಾನಾ ಭವನ್ ವಿಧಾನಸಭೆ ಕ್ಷೇತ್ರದ ಗ್ರಾಮದಲ್ಲಿ ಹೊಸ ರಸ್ತೆಗಾಗಿ ಶಂಕುಸ್ಥಾಪನೆ ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ.
2013 ರಲ್ಲಿ ಮುಜಾಫರ್ ನಗರ ದೊಂಬಿ ಪ್ರಕರಣದಲ್ಲಿ ರಾಣಾ ವಿರುದ್ಧ ದೂರು ದಾಖಲಾಗಿತ್ತು. ಕೈರಣಾದಲ್ಲಿ 24 ಗಂಟೆಯೂ ಕರ್ಫ್ಯೂ ವಿಧಿಸುವುದಾಗಿ ಹೇಳಿದ್ದ ಸಂಬಂಧವೂ ರಾಣಾ ವಿರುದ್ಧ ದೂರು ದಾಖಲಾಗಿತ್ತು. ಸುರೇಶ್ ರಾಣಾ ವಿರುದ್ಧ ಮೂರನೇ ಬಾರಿಗೆ ಕೇಸು ದಾಖಲಾಗಿದೆ.