ದೇಶ

ದ್ವೇಷ ರಾಜಕಾರಣದಿಂದ ಭಾರತವನ್ನು ರಕ್ಷಿಸಬೇಕಿದೆ: ಅರವಿಂದ್ ಕೇಜ್ರಿವಾಲ್

Shilpa D
ನವದೆಹಲಿ: ಧರ್ಮ ಹಾಗೂ ಗೋವಿನ ಹೆಸರಲ್ಲಿ ಇತ್ತೀಚೆಗೆ ದೊಂಬಿ, ಹಿಂಸಾಚಾರಗಳು ನಡೆಯುತ್ತಿವೆ, ದೇಶವನ್ನು ದ್ವೇಷ ರಾಜಕಾರಣದಿಂದ ರಕ್ಷಿಸುವ ಅವಶ್ಯಕತೆ ಇದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಸೂಕ್ತ ಸಿದ್ದತೆಗಳಿಲ್ಲದೇ ಜಿಎಸ್  ಟಿ ಜಾರಿಗೆ ತಂದಿರುವುಕ್ಕೆ ವಿರೋಧ ವ್ಯಕ್ತಪಡಿಸಿರುವ ಕೇಜ್ರಿವಾಲ್, ಮೂಲಭೂತ ಪರಿಕಲ್ಪನೆಯಿಲ್ಲದೇ  ಹೊಸತೆರಿಗೆ ನೀತಿ ಜಾರಿಗೆ ತಂದಿರುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಜಿಎಸ್ ಟಿಯಿಂದ ಹಣದುಬ್ಬರ ಮತ್ತಷ್ಟು ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.
ಯಾವುದೇ ಧರ್ಮ ಕೊಲ್ಲುವುದನ್ನು ಬೋಧಿಸುವುದಿಲ್ಲ, ಧರ್ಮದ ಹಾಗೂ ಗೋವಿನ ಹೆಸರಲ್ಲಿ ನಡೆಯುತ್ತಿರುವ ಕೊಲೆ ಹಾಗೂ ದೊಂಬಿಗಳ ಹಿಂದೆ ದ್ವೇಷ ರಾಜಕಾರಣ ಅಡಗಿದೆ, ಹೀಗಾಗಿ ನಮ್ಮ ದೇಶವನ್ನು ದ್ವೇಷ ರಾಜಕಾರಣದಿಂದ ರಕ್ಷಿಸುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ಒಂದು ವೇಳೆದ್ವೇಷ ರಾಜಕಾರಣಕ್ಕೆ ಬಲಿಯಾಗಬಾರದೆಂದು ಜನರು ನಿರ್ಧರಿಸಿದರೇ ನಾಯಕರು ಸುಮ್ಮನೆ ಬಿಡುವುದಿಲ್ಲ, ಇಂಥಹ ನಿರ್ಧಾರಗಳನ್ನು ಸಹಿಸಲಾಗುವುದಿಲ್ಲ ಎಂಬ ಸಂದೇಶ ರವಾನಿಸುತ್ತಾರೆ ಎಂದು ಕೇಜ್ರಿವಾಲ್ ಅಭಿಪ್ರಾಯ ಪಟ್ಟಿದ್ದಾರೆ.
SCROLL FOR NEXT