ಶಾಲಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಮಹಾರಾಷ್ಟ್ರ ಸಚಿವನ ತಂದೆ: ವಿಡಿಯೋ ವೈರಲ್ 
ದೇಶ

ಶಾಲಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಮಹಾರಾಷ್ಟ್ರ ಸಚಿವನ ತಂದೆ: ವಿಡಿಯೋ ವೈರಲ್

ಮಹಾರಾಷ್ಟ್ರ ಗೃಹ ಖಾತೆ ರಾಜ್ಯ ಸಚಿವ ರಂಜಿತ್ ಪಾಟೀಲ್ ಅವರ ತಂದೆ ವಿ.ಎನ್. ಪಾಟೀಲ್ ಅವರು ಶಾಲಾ ಸಿಬ್ಬಂದಿಗೆ ನಿಂದಿನಿ, ಕಪಾಳಕ್ಕೆ ಹೊಡೆದಿರುವ ವಿಡಿಯೋವೊಂದು ಇದೀಗ ಸಾಮಾಜಿಕ...

ಮುಂಬೈ: ಮಹಾರಾಷ್ಟ್ರ ಗೃಹ ಖಾತೆ ರಾಜ್ಯ ಸಚಿವ ರಂಜಿತ್ ಪಾಟೀಲ್ ಅವರ ತಂದೆ ವಿ.ಎನ್. ಪಾಟೀಲ್ ಅವರು ಶಾಲಾ ಸಿಬ್ಬಂದಿಗೆ ನಿಂದಿನಿ, ಕಪಾಳಕ್ಕೆ ಹೊಡೆದಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
ರಂಜಿತ್ ಪಾಟೀಲ್ ಅವರ ತಂದೆ ವಿ.ಎನ್. ಪಾಟೀಲ್ ಅವರು ಮಾಜಿ ಶಾಸಕರಾಗಿದ್ದು, ತಮ್ಮ ಫೌಂಡೇಷನ್ ಅಡಿಯಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಅಕೋಲಾ ಜಿಲ್ಲೆಯ ಮುರ್ತಿಜಾಪುರ್ ನ ತೆಹ್ಸಿಲ್ ನಲ್ಲಿ ಶಾಲೆಯೊಂದಕ್ಕೆ ಭೇಟಿ ನೀಡಿದಾಗ ಅಲ್ಲಿನ ಸಿಬ್ಬಂದಿಯನ್ನು ನಿಂದಿಸಿರುವ ಪಾಟೀಲ್ ಅವರು ಕಪಾಳಕ್ಕೆ ಹೊಡೆದಿದ್ದಾರೆಂದು ತಿಳಿದುಬಂದಿದೆ. ಪ್ರಕಱಣ ಸಂಬಂಧ ಇದೀಗ ಪಾಟೀಲ್ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. 
ತೆಹ್ಸಿಲ್ ನಲ್ಲಿರುವ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗುತ್ತಿದ್ದಾರೆ. ಆದರೆ, ನಮ್ಮ ಶಾಲೆಯಲ್ಲಿ ಏಕೆ ಮಕ್ಕಳು ದಾಖಲಾಗುತ್ತಿಲ್ಲ ಎಂದು ತಿಳಿಯುವ ಸಲುವಾಗಿ ಶಾಲೆಗೆ ಪಾಟೀಲ್ ಅವರು ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ. ಭೇಟಿ ವೇಳೆ ಕೆಲ ಶಾಲಾ ಸಿಬ್ಬಂದಿಯೊಬ್ಬರು ತಮ್ಮ ಮೊಬೈಲ್ ಫೋನಿನಲ್ಲಿ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದರು. ಈ ವೇಳೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಪಾಟೀಲ್ ಅವರು ನಿಂದಿಸಿ ಕಪಾಳಕ್ಕೆ ಹೊಡೆದಿದ್ದಾರೆಂದು ತಿಳಿದುಬಂದಿದೆ. 
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಂಜಿತ್ ಪಾಡಟೀಲ್ ಅವರು, ಸಿಬ್ಬಂದಿಗೆ ನಿಂದಿಸಿರುವುದು, ಹಲ್ಲೆ ಮಾಡಿರುವುದನ್ನು ನನ್ನ ತಂದೆ ನಿರಾಕರಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು, ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ: 15 ಕಿ.ಮೀ. ಒಳಗಿನ ಅಕ್ರಮ ನಿರ್ಮಾಣ ಕೆಡವಲು ಅಮಿತ್ ಶಾ ಸೂಚನೆ

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

SCROLL FOR NEXT