ನವದೆಹಲಿ: ದಕ್ಷಿಣ ಮುಂಬಯಿಯಲ್ಲಿರುವ ಐತಿಹಾಸಿಕ ಹಾಜಿ ಅಲಿ ದರ್ಗಾ ರಸ್ತೆಯನ್ನು ಮಹಾರಾಷ್ಟ್ರ ಸರ್ಕಾರ ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿ ತೆರವಿಗೆ ಸುಪ್ರೀಂಕೋರ್ಟ್ ಕೊನೆಯ ಅವಕಾಶ ನೀಡಿದೆ.
ಮಹಾರಾಷ್ಟ್ರ ಸರ್ಕಾರ ಹಾಜಿ ಅಲಿ ದರ್ಗಾದ 908 ಸ್ಕ್ವೇರ್ ಮೀಟರ್ ಜಾಗವನ್ನು ಒತ್ತವರಿ ಮಾಡಿಕೊಂಡಿದ್ದು, ಇಂದಿನಿಂದ ಎರಡು ವಾರಗಳಲ್ಲಿ ತೆರವುಗೊಳಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್, ಮತ್ತು ಡಿ.ವೈ ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿದೆ.
ಸಂಬಂಧಪಟ್ಟ ಪ್ರಾಧಿಕಾರವು ಎರಡು ವಾರದೊಳಗೆ ಒತ್ತುವರಿ ತೆರವುಗೊಳಿಸಬೇಕು ಇಲ್ಲದಿದ್ದರೇ, ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸುಪ್ರೀಂ ಎಚ್ಚರಿಕೆ ನೀಡಿದೆ.
ತಾನಾಗಿಯೇ ಒತ್ತುವರಿ ತೆರವು ಮಾಡಲು ಹಾಜಿ ಅಲಿ ದರ್ಗಾ ಟ್ರಸ್ಟ್ ಮುಂದಾಗಿತ್ತು, ಆದರೆ ಆ ಕೆಲಸವನ್ನು ಪೂರ್ಣಗೊಳಿಸಲು ಅಸಮರ್ಥತೆ ತೋರಿದೆ. ಈ ಹಿನ್ನೆಲೆಯಲ್ಲಿ ಜುಲೈ 3ರಿಂದ ಎರಡು ವಾರದೊಳಗೆ ಒತ್ತುವರಿ ತೆರವುಗೊಳಿಸದಿದ್ದರೇ ಗಂಭೀರ ಪರಿಣಾಮ ಎದುರಿಸಬೇಕೆಂದು ಮುಂಬಯಿ ಕೊಲಬಾ ಜೋನ್ ಜಿಲ್ಲಾಧಿಕಾರಿಗೆ ಕೋರ್ಟ್ ಸೂಚಿಸಿದೆ.
ಒತ್ತುವರಿ ತೆರವುಗೊಳಿಸಲು ಹಾಜಿ ಅಲಿ ದರ್ಗಾ ಕೈಗೊಂಡ ಪ್ರಯತ್ನದ ಬಗ್ಗೆ ಮೇ-9 ರಂದು ನ್ಯಾಯಾಲಯ ಶ್ಲಾಘಿಸಿತ್ತು. ಮುಸ್ಲಿಂ ವರ್ತಕ ಸೈಯ್ಯದ್ ಪೀರ್ ಹಾಜಿ ಅಲಿ ಶಾಹ್ ಬುಖಾರಿ ಸ್ಮರಣಾರ್ಥ 1431 ರಲ್ಲಿ ಹಾಜಿ ಅಲಿ ದರ್ಗಾ ನಿರ್ಮಾಣವಾಗಿತ್ತು.