ದೇಶ

ಇಸಿಸ್ ಉಗ್ರರಿಗೆ ಹಣ ವರ್ಗಾವಣೆ: ಚೆನ್ನೈನಲ್ಲಿ ಶಂಕಿತ ಉಗ್ರನ ಬಂಧನ

Manjula VN
ಚೆನ್ನೈ: ಇಸಿಸ್ ಉಗ್ರ ಸಂಘಟನೆಗೆ ಹಣ ವರ್ಗಾವಣೆ ಮಾಡುತ್ತಿದ್ದ ಚೆನ್ನೈ ಮೂಲದ ಶಂಕಿತ ಉಗ್ರನೊಬ್ಬನನ್ನು ರಾಜಸ್ತಾನ ಉಗ್ರ ನಿಗ್ರಹ ಪಡೆಯ ಅಧಿಕಾರಿಗಳು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ. 
ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿರುವ ಇಸಿಸ್ ಉಗ್ರರು ಭಾರತದಲ್ಲಿ ತಮ್ಮ ಪ್ರಾಬಲ್ಯತೆಯನ್ನು ಸ್ಥಾಪಿಸಲು ಹಾತೊರೆಯುತ್ತಿದ್ದು, ಇಲ್ಲಿನ ಯುವಕರ್ನು ಸೆಳೆಯಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಭಾರತೀಯ ಭದ್ರತಾಗಳು ಇಸಿಸ್ ಉಗ್ರರ ಚಟುವಟಿಕೆಗಳ ಮೇಲೆ ಕಣ್ಗಾವಲಿರಿಸಿದ್ದು, ಇದರಂತೆ ಶಂತಿಕತರನ್ನು ಭೇಧಿಸುವಲ್ಲಿ ನಿಪುಣರಾಗಿದ್ದಾರೆ. 
ಪ್ರಸ್ತುತ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರರನ್ನು ಹರೂನ್ (30) ಎಂದು ಗುರ್ತಿಸಲಾಗಿದ್ದು, ಶಂಕಿತನನ್ನು ಬಂಧನಕ್ಕೊಳಪಡಿಸಿರುವ ಅಧಿಕಾರಿಗಳು ವಿಚಾರಣೆಗಾಗಿ ಜೈಪುರಕ್ಕೆ ಕರೆದೊಯ್ದಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಮೊಹಮ್ಮದ್ ಇಕ್ಬಾಲ್ ಎಂಬ ಶಂಕಿತನನ್ನು ಬಂಧನಕ್ಕೊಳಪಡಿಸಲಾಗಿತ್ತು. ವಿಚಾರಣೆ ವೇಳೆ ಇಕ್ಬಾಲ್ ಹರೂನ್ ಬಗ್ಗೆ ಮಾಹಿತಿ ನೀಡಿದ್ದಾನೆ. ಇಕ್ಬಾಲ್ ನೀಡಿದ ಮಾಹಿತಿ ಆಧರಿಸಿ ಚೆನ್ನೈಗೆ ಧಾವಿಸಿದ್ದ ರಾಜಸ್ತಾನದ ಉಗ್ರ ನಿಗ್ರಹ ಪಡೆ ಅಧಿಕಾರಿಗಳು ಇಸಿಸ್ ಏಜೆಂಟ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 
SCROLL FOR NEXT