ಸಂಗ್ರಹ ಚಿತ್ರ 
ದೇಶ

ಪುಲ್ವಾಮ ಎನ್'ಕೌಂಟರ್: ಅಡಗಿದ್ದ ಕುಳಿತಿದ್ದ ಮೂರನೇ ಉಗ್ರನನ್ನು ಸದೆಬಡಿದ ಸೇನೆ

ಜಮ್ಮು ಮತ್ತು ಕಾಶ್ಮೀರದಲ್ಲ ಪುಲ್ವಾಮ ಜಿಲ್ಲೆಯಲ್ಲಿ ದಾಳಿ ನಡೆಸಿದ್ದ ಮೂವರು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡುವುದಲ್ಲಿ ಯಶಸ್ವಿಯಾಗಿದೆ...

ಪುಲ್ವಾಮ: ಜಮ್ಮು ಮತ್ತು ಕಾಶ್ಮೀರದಲ್ಲ ಪುಲ್ವಾಮ ಜಿಲ್ಲೆಯಲ್ಲಿ ದಾಳಿ ನಡೆಸಿದ್ದ ಮೂವರು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡುವುದಲ್ಲಿ ಯಶಸ್ವಿಯಾಗಿದೆ. 
ನಿನ್ನೆಯಷ್ಟೇ ಪುಲ್ವಾಮ ಜಿಲ್ಲೆಯ ಬಮ್ನೂ ಎಂಬ ಪ್ರದೇಶದಲ್ಲಿ ಮೂವರು ಉಗ್ರರು ದಾಳಿ ನಡೆಸಿದ್ದರು. ಕೂಡಲೇ ಕಾರ್ಯಾಚರಣೆಗಿಳಿದಿದ್ದ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿತ್ತು. ಮತ್ತೊಬ್ಬ ಉಗ್ರ ಅಡಗಿ ಕುಳಿತು ಸೇನೆ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದ. 
ಇದರಂತೆ ಸೇನಾ ಪಡೆ ಕಾರ್ಯಾಚರಣೆಯನ್ನು ಮುಂದುವರೆಸಿತ್ತು. ಇದೀಗ ಅಡಗಿ ಕುಳಿತಿದ್ದ ಮತ್ತೊಬ್ಬ ಮೂರನೇ ಉಗ್ರನನ್ನು ಸೇನೆ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆಯನ್ನು ಮತ್ತೆ ಮುಂದುವರೆಸಿದೆ ಎಂದು ತಿಳಿದುಬಂದಿದೆ. 
ಸ್ಥಳದಲ್ಲಿ ಉಗ್ರರು ಬಳಿಸಿದ್ದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ಸೇನಾ ಪಡೆ ವಶಕ್ಕೆ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಕಾರ್ಯಾಚರಣೆ ವೇಳೆ ಕೆಲ ಸ್ಥಳೀಯರು ಪ್ರತಿಭಟನೆ ನಡೆಸಲು ಮುಂದಾಗಿದ್ದು, ಈ ವೇಳೆ 10 ನಾಗರಿಕರಿಗೆ ಗಾಯಗಳಾಗಿರುವುದಾಗಿ ವರದಿಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

17 ಭಾಷೆಗಳಲ್ಲಿ ಹಾಡಿದರೂ ಕನ್ನಡದ ನೆಲದಲ್ಲೇ ಮಣ್ಣಾದ ಗಾನಕೋಗಿಲೆ: ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಸ್.ಜಾನಕಿ ಅಂತ್ಯಕ್ರಿಯೆ!

ನಿಮ್ಮ ತಲೆ ತೆಗಿತೀವಿ: ಟ್ರಂಪ್, ನೆತನ್ಯಾಹು, ಮೆಲೋನಿ ಹಾಗೂ ಯುರೋಪಿಯನ್ ನಾಯಕರು ನಮ್ಮ ಟಾರ್ಗೆಟ್; ಇರಾನ್ ಪತ್ರಿಕೆ

'96 ' ಚಿತ್ರದಲ್ಲಿ ಜಾನಕಿ ಹೆಸರಿನ ಪಾತ್ರ: ನೆನಪಿಸಿಕೊಂಡ ನಟಿ ತ್ರಿಶಾ ಕೃಷ್ಣನ್, Deleted scene ಹಂಚಿಕೊಂಡ ಅಭಿಮಾನಿಗಳು! ಅದ್ರಲ್ಲಿ ಏನಿದೆ..? Video..

ಅಮೆರಿಕ ಜೊತೆ ಒಪ್ಪಂದ 'ಮುಗಿದಿದೆ': ಹೊಸ ದಾಳಿಗಳ ಬೆನ್ನಲ್ಲೇ ಇರಾನ್ ಘೋಷಣೆ

ಮಾರುವೇಷ ಯಾಕೆ ಸ್ವಾಮಿ... ಇದು ಚಿಲ್ಲರೆ ಕಾಲವಲ್ಲ, ಕ್ಯೂಆರ್ ಕೋಡ್ ಕಾಲ: ಸಚಿವ ಸುರೇಶ್‌ಗೆ ಶಾಸಕ ಸುರೇಶ್ ಕುಮಾರ್ ಪಾಠ