ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

12ರಂದು ದೇಶದಾದ್ಯಂತ ಪೆಟ್ರೋಲ್ ಬಂಕ್ ಬಂದ್

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಭಾರತ ಪೆಟ್ರೋಲ್ ವ್ಯಾಪಾರಿಗಳ ಸಂಘ ಇದೇ ಜುಲೈ 12ರಂದು ಪೆಟ್ರೋಲ್ ಬಂಕ್ ಗಳ ಬಂದ್ ನಡೆಸುವುದಾಗಿ ಸೋಮವಾರ ಪ್ರಕಟಿಸಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 4 Jul 2017, 10:51 am

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಭಾರತ ಪೆಟ್ರೋಲ್ ವ್ಯಾಪಾರಿಗಳ ಸಂಘ ಇದೇ ಜುಲೈ 12ರಂದು ಪೆಟ್ರೋಲ್ ಬಂಕ್ ಗಳ ಬಂದ್ ನಡೆಸುವುದಾಗಿ ಸೋಮವಾರ ಪ್ರಕಟಿಸಿದೆ.

ಪೆಟ್ರೋಲ್ ಪಂಪ್​ಗಳಲ್ಲಿ ಶೇ.100ರಷ್ಟು ಸ್ವಯಂಚಾಲಿತ ವ್ಯವಸ್ಥೆಯನ್ನು (ಆಟೋಮೇಟೆಡ್ ಸಿಸ್ಟಂ) ಸ್ಥಾಪಿಸುವಲ್ಲಿ ಮತ್ತು ಪ್ರತಿದಿನ ದರ ಪರಿಷ್ಕರಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ತೈಲ ಮಾರಾಟ ಕಂಪನಿಗಳು  ವಿಫಲವಾಗಿರುವುದನ್ನು ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ದೇಶಾದ್ಯಂತ ಪೆಟ್ರೋಲ್ ಬಂಕ್​ ಗಳು ಜುಲೈ 5ರಂದು ಖರೀದಿ ಸ್ಥಗಿತ (ನೋ ಪರ್ಚೇಸ್ ಡೇ) ಆಚರಣೆ ಮಾಡಲಿದ್ದು, ಬಳಿಕ  ಜುಲೈ 12ರಂದು ಪೆಟ್ರೋಲ್ ಬಂಕ್ ಸಂಪೂರ್ಣ ಬಂದ್ ಆಚರಿಸಲಿವೆ ಎಂದು ಅಖಿಲ ಭಾರತ ಪೆಟ್ರೋಲ್ ವ್ಯಾಪಾರಿಗಳ ಸಂಘ (ಎಐಪಿಡಿಎ) ತಿಳಿಸಿದೆ.

ಜೂನ್ 29ರಂದು ತೈಲ ಮಾರಾಟ ಕಂಪನಿಗಳ (ಒಎಂಸಿ) ಜೊತೆ ಸತತ 3 ಗಂಟೆ ಕಾಲ ಸಭೆ ನಡೆಸಿದ್ದೇವೆ. ತೈಲ ದರದಲ್ಲಿ ಸ್ಥಿರತೆ ಅಗತ್ಯವಿದ್ದು, ಇದಕ್ಕೆ ತೈಲ ಮಾರಾಟ ಕಂಪನಿಗಳು ಕೂಡ ಒಪ್ಪಿಗೆ ನೀಡಿವೆ. ಈ ನಿಟ್ಟಿನಲ್ಲಿ ಕ್ರಮದ  ಭರವಸೆ ನೀಡಿವೆ. ಆದರೆ ದರ ರಕ್ಷಣೆ ಜಾರಿಗೆ ನಿರ್ದಿಷ್ಟ ದಿನಾಂಕ ನೀಡದಿರುವ ಕಾರಣ ಪ್ರತಿಭಟನೆಗೆ ಮುಂದಾಗಿದ್ದೇವೆ. ನಿರ್ಧಾರ ಮರುಪರಿಶೀಲನೆಗಾಗಿ ಜೂನ್ 30ರ ಮಧ್ಯಾಹ್ನ 2 ಗಂಟೆಯವರೆಗೆ ಕಾಯುವಂತೆ ತೈಲ ಮಾರಾಟ  ಕಂಪನಿಗಳು ಮನವಿ ಮಾಡಿದ್ದವು. ಆದರೆ ಇನ್ನೂ ಫಲಿತಾಂಶ ಬಂದಿಲ್ಲ ಎಂದು ಎಐಪಿಡಿಎ ವಕ್ತಾರ ಅಲಿ ದಾರುವಾಲ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇನ್ನು ಪಶ್ಟಿಮ ಬಂಗಾಳದ ಪೆಟ್ರೋಲ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ತುಷಾರ್ ಸೇನ್ ಅವರು, ದೇಶಾದ್ಯಂತ ಇಂದಿಗೂ ಕೇವಲ ಶೇ.1ರಷ್ಟು ಮಾತ್ರ ಸ್ವಯಂಚಾಲಿತ ಪೆಟ್ರೋಲ್ ಬಂಕ್ ವ್ಯವಸ್ಥೆ ಮಾಡಲಾಗಿದೆ. ಇಂಧನ  ಸಂಸ್ಥೆಗಳು ಸಂಪೂರ್ಣ ಸ್ವಯಂ ಚಾಲಿತ ಪೆಟ್ರೋಲ್ ಬಂಕ್ ಗಳನ್ನು ಅಳವಡಿಸಬಹುದು. ಆದರೆ ಆ ಭರವಸೆ ಇನ್ನೂ ಈಡೇರಿಲ್ಲ. ಇದೇ ಕಾರಣಕ್ಕೆ ಜುಲೈ 12ರಂದು ಪೆಟ್ರೋಲ್ ಬಂಕ್ ಬಂದ್ ಗೆ ಕರೆ ನೀಡಲಾಗಿದೆ ಎಂದು  ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement