KS Jawahar 
ದೇಶ

ಬಿಯರ್ ಆರೋಗ್ಯಕರ ಪಾನೀಯ: ಆಂಧ್ರ ಅಬಕಾರಿ ಸಚಿವ

ಬಿಯರ್ ಆರೋಗ್ಯಕ್ಕೆ ಒಳ್ಳೆಯದು, ಇದೊಂದು ಆರೋಗ್ಯಯುತ ಪೇಯ ಎಂದು ಆಅಂಧ್ರ ಪ್ರದೇಶ ಅಬಕಾರಿ ಸಚಿವರು ಹೇಳಿಕೆ ಕೊಡುವ ಮೂಲಕ ಬಿಯರ್ ..

ವಿಜಯವಾಡ:  ಬಿಯರ್ ಆರೋಗ್ಯಕ್ಕೆ ಒಳ್ಳೆಯದು, ಇದೊಂದು ಆರೋಗ್ಯಯುತ ಪೇಯ ಎಂದು  ಆಅಂಧ್ರ ಪ್ರದೇಶ ಅಬಕಾರಿ ಸಚಿವರು ಹೇಳಿಕೆ ಕೊಡುವ ಮೂಲಕ ಬಿಯರ್ ಕುಡಿಯುವಂತೆ ಅಲ್ಲಿನ ರಾಜ್ಯ ಸರ್ಕಾರ ಪ್ರೇರೇಪಿಸುತ್ತಿದೆ. 
ರಾಜ್ಯದ ಅಬಕಾರಿ ನೀತಿ ಬಗ್ಗೆ ಖಾಸಗಿ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿರುವ ಸಚಿವ ಕೆ.ಎಸ್ ಜವಹರ್ ಬಿಯರ್ ಆರೋಗ್ಯಕ್ಕೆ ಉತ್ತಮವಾಗಿದ್ದು, ಬೇಕಾದರೇ ಅದನ್ನು ತಾವು ಸಾಬೀತು ಪಡಿಸುವುದಾಗಿ ಹೇಳಿದ್ದಾರೆ.
ಇತರೆ ಆಲ್ಕೋಹಾಲ್ ಹೊಂದಿದ ಮದ್ಯದ ಬಳಕೆಗಿಂತ ಹೆಚ್ಚಾಗಿ ಬಿಯರ್ ಅನ್ನು ಸರ್ಕಾರ ಪ್ರೋತ್ಸಾಹಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಜನರ ಕುಡಿಯುವ ಅಭ್ಯಾಸವನ್ನು ಬದಲಾಯಿಸಲು ಸಾಧ್ಯವಿಲ್ಲ, ಆದರೆ ನಾವು ಕನಿಷ್ಠ ಮದ್ಯದಂಶ ಹೊಂದಿರುವ ಮದ್ಯ ಲಭ್ಯವಾಗುವಂತೆ ಮಾಡಬಹುದು ಎಂದು ಹೇಳಿದ್ದಾರೆ. ಸಚಿವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜವಹರ್ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ.  ನಾನು ಹೇಳಿದ್ದು ಇತರ ಮದ್ಯಗಳಿಗಿಂತ ಬಿಯರ್ ನಲ್ಲಿ ಆಲ್ಕೋಹಾಲ್ ಪ್ರಮಾಣ ಕಡಿಮೆಯಿದೆ ಎಂಬ ರೀತಿಯಲ್ಲಿ ನಾನು ಹೇಳಿಕೆ ನೀಡಿದ್ದು ಎಂದು ಸಮರ್ಥನೆ ನೀಡಿದ್ದಾರೆ. 
ಬಿಯರ್ ಗು ಬ್ರೀಜರ್ ಗೂ ಇರುವ ವ್ಯತ್ಯಾಸ ಗೊತ್ತಿಲ್ಲ ಎಂಬ ಸಚಿವರ ಹೇಳಿಕೆಯನ್ನು ನೆಟ್ಟಿಜನ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಮಾಡದಂತೆ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT