ಬ್ರಿಟನ್ ತೀವ್ರವಾದದೊಂದಿಗೆ ಸೌದಿ ನಂಟು ಸ್ಪಷ್ಟ: ವರದಿ
ಬ್ರಿಟನ್ ನಲ್ಲಿ ಹೆಚ್ಚುತ್ತಿರುವ ಉಗ್ರವಾದಕ್ಕೆ ಸೌದಿ ಅರೇಬಿಯಾ ನಂಟಿದೆ ಎಂಬ ಅಂಶವನ್ನು ವರದಿಯೊಂದು ಬಹಿರಂಗಪಡಿಸಿದೆ.
ಲಂಡನ್: ಬ್ರಿಟನ್ ನಲ್ಲಿ ಹೆಚ್ಚುತ್ತಿರುವ ಉಗ್ರವಾದಕ್ಕೆ ಸೌದಿ ಅರೇಬಿಯಾ ನಂಟಿದೆ ಎಂಬ ಅಂಶವನ್ನು ವರದಿಯೊಂದು ಬಹಿರಂಗಪಡಿಸಿದೆ.
ಬಿಬಿಸಿ ಹೆನ್ರಿ ಜಾಕ್ಸನ್ ಸೊಸೈಟಿ ಹೇಳಿಕೆಯನ್ನು ಪ್ರಕಟಿಸಿದ್ದು, ಬ್ರಿಟನ್ ನಲ್ಲಿ ಹೆಚ್ಚುತ್ತಿರುವ ತೀವ್ರಗಾಮಿ ಇಸ್ಲಾಮಿಕ್ ಸಂಸ್ಥೆಗಳಿಗೂ ಸೌದಿಗೂ ನಂಟಿದೆ ಎಂಬ ವರದಿಯನ್ನು ಪ್ರಕಟಿಸಿದೆ. ಬ್ರಿಟನ್ ನಲ್ಲಿ ಹೆಚ್ಚುತಿರುವ ತೀವ್ರವಾದದೊಂದಿಗೆ ಸೌದಿ ಅರೇಬಿಯಾ ಹಾಗೂ ಗಲ್ಫ್ ರಾಷ್ಟ್ರಗಳ ನಂಟಿನ ಬಗ್ಗೆ ತನಿಖೆ ನಡೆಸಬೇಕೆಂದು ವಿದೇಶಾಂಗ ಇಲಾಖೆಯ ಥಿಂಕ್ ಟ್ಯಾಂಕ್ ಆಗ್ರಹಿಸಿದೆ.
ಇನ್ನು ಜಾಕ್ಸನ್ ಸೊಸೈಟಿಯ ವರದಿಯನ್ನು ಯುಕೆಯಲ್ಲಿರುವ ಸೌದಿ ಅರೇಬಿಯಾದ ರಾಯಭಾರಿ ಕಚೇರಿ ತಳ್ಳಿಹಾಕಿದ್ದು, ವರದಿ ಸಂಪೂರ್ಣವಾಗಿ ಸುಳ್ಳು ಎಂದು ಹೇಳಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.