ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ 
ದೇಶ

ಇಸ್ರೇಲ್ ಪ್ರವಾಸದ ವೇಳೆ ಪ್ರಧಾನಿ ಮೋದಿ ನೀಲಿ ಬಿಳುಪಿನ ವಸ್ತ್ರ ಧರಿಸಿದ್ದೇಕೆ!

ಇಸ್ರೇಲ್ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೊಟ್ಟಿದ್ದ ವಸ್ತ್ರ ಇಸ್ರೇಲಿಗರ ಗಮನ ಸೆಳೆದಿದ್ದು, ರಾಜತಾಂತ್ರಿಕವಾಗಿಯೂ ಪ್ರಧಾನಿ ಮೋದಿ ವಸ್ತ್ರ ಸಾಕಷ್ಚು ಸುದ್ದಿಗೆ ಗ್ರಾಸವಾಗಿದೆ.

ಜೆರುಸಲೇಂ: ಇಸ್ರೇಲ್ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೊಟ್ಟಿದ್ದ ವಸ್ತ್ರ ಇಸ್ರೇಲಿಗರ ಗಮನ ಸೆಳೆದಿದ್ದು, ರಾಜತಾಂತ್ರಿಕವಾಗಿಯೂ ಪ್ರಧಾನಿ ಮೋದಿ ವಸ್ತ್ರ ಸಾಕಷ್ಚು ಸುದ್ದಿಗೆ ಗ್ರಾಸವಾಗಿದೆ.

ವಿಶೇಷವೆಂದರೆ ಇಸ್ರೇಲ್ ದೇಶದ ಧ್ವಜ ಕೂಡ ಬಿಳಿಪು ಮತ್ತು ನೀಲಿ ಬಣ್ಣದ್ದಾಗಿದ್ದು, ಪ್ರಧಾನಿ ಮೋದಿ ತೊಟ್ಟಿದ್ದ ಕೋಟ್ ಕೂಡ ಬಿಳಿ ಮತ್ತು ನೀಲಿ ಬಣ್ಣದಿಂದ ಕೂಡಿತ್ತು. ಬಿಳಿ ಬಣ್ಣದ ಕೋಟ್ ನಲ್ಲಿ ನೀಲಿ ಬಣ್ಣದ ಜೇಬನ್ನು  ಹೊಲಿಯಲಾಗಿತ್ತು. ಇದು ಇಸ್ರೇಲ್ ನೊಂದಿಗೆ ಭಾರತವಿದೆ ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಇಂತಹ ವಿಶೇಷ ಕೋಟ್ ಧರಿಸಿದ್ದರು ಎಂದು ಹೇಳಲಾಗುತ್ತಿದೆ.

ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೋಟ್ ಇದೀಗ ಇಸ್ರೇಲಿಗರ ಗಮನ ಸೆಳೆಯುತ್ತಿದೆ. ಇದೇ ಪ್ರವಾಸದ ವೇಳೆ ಯಾದ್ ವಾಶೇಮ್ ಹೊಲೊಕಾಸ್ಟ್ ಮೆಮೋರಿಯಲ್ ಮ್ಯೂಸಿಯಂಗೆ ಭೇಟಿ ನೀಡಿದ್ದ ಪ್ರಧಾನಿ  ಮೋದಿ ಅಲ್ಲೂ ಕೂಡ ತಮ್ಮ ವಸ್ತ್ರಗಳಿಂದಲೇ ಗಮನಸೆಳೆದೆರು. ಮ್ಯೂಸಿಯಂ ಭೇಟಿ ನೀಡುವ ಪ್ರವಾಸಿಗರು ತಲೆಗೆ ಬಟ್ಟೆ ಹಾಕಿಕೊಳ್ಳುವ ಮೂಲಕ ಗೌರವ ಸಲ್ಲಿಕೆ ಮಾಡುತ್ತಾರೆ. ಆದರೆ ಮ್ಯೂಸಿಯಂಗೆ ವಿಶೇಷ ಅತಿಥಿಯಾಗಿದ್ದ  ಪ್ರಧಾನಿ ನರೇಂದ್ರ ಮೋದಿ ಕೂಡ ಅದೇ ರೀತಿಯ ವಸ್ತ್ರ ಸಂಹಿತೆ ಅನುಸರಿಸಿ ಗಮನ ಸೆಳೆದಿದ್ದಾರೆ. ಮ್ಯೂಸಿಯಂ ಪ್ರವೇಶಕ್ಕೂ ಮುನ್ನ ಹಿಮಾಚಲಿ ಕ್ಯಾಪ್ ಧರಿಸಿ ಮ್ಯೂಸಿಯಂ ಪ್ರವೇಶಿಸಿದ್ಗರು. ಇದು ಅಲ್ಲಿಗೆ ಆಗಮಿಸಿದ್ದ  ಪ್ರವಾಸಿಗರನ್ನು ಸೆಳೆಯಿತು.

ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ತೊಟ್ಟಿದ್ದ ಕೋಟ್ ಕೂಡ ಭಾರಿ ಸುದ್ದಿಗೆ ಗ್ರಾಸವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಪ್ರವಾಹದ ರೌದ್ರಾವತಾರ: ಮತ್ತೊಂದು ಜಲಪ್ರಳಯದ ಭೀತಿ; ರಕ್ಷಣಾ ಕಾರ್ಯಾಚರಣೆ ಸ್ಥಗಿತಕ್ಕೆ ಆದೇಶ, ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೈನಿಕರಿಗೆ ಸೂಚನೆ..!

2019- 2023 ರವರೆಗೆ MUDA ದಲ್ಲಿ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು: ನಿವೇಶನ ಪಡೆದವರಿಗೆ ಯತೀಂದ್ರ ಸಿದ್ದರಾಮಯ್ಯ ಶಾಕ್!

US-Iran ಸಂಘರ್ಷ ಉಲ್ಬಣ: ನೌಕಾ ದಿಗ್ಬಂಧನ ಮುಂದುವರಿದರೆ ಶೇ.100ರಷ್ಟು ಪ್ರತೀಕಾರ; ‘ನೆತನ್ಯಾಹು ನರಕಕ್ಕೆ’: ಟ್ರಂಪ್‌ಗೆ Tehran ಖಡಕ್ ಎಚ್ಚರಿಕೆ

ಪ್ರವಾಹದ ಅಬ್ಬರಕ್ಕೆ ನೇಪಾಳ ತತ್ತರ; ಸಂಪರ್ಕಕ್ಕೆ ಸಿಗದೆ 290 ಭಾರತೀಯರು, ರಕ್ಷಣಾ ಕಾರ್ಯಾಚರಣೆ ಚುರುಕು..!

ನೇಪಾಳ-ಟಿಬೆಟ್ ಗಡಿಯಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 472ಕ್ಕೆ ಏರಿಕೆ; 1,400ಕ್ಕೂ ಹೆಚ್ಚು ಜನ ನಾಪತ್ತೆ, ಮತ್ತೊಂದು ಪ್ರವಾಹದ ಭೀತಿ..!