ದೇಶ

ಅಯೋಧ್ಯೆ: ರಾಮ ಮಂದಿರ ನಿರ್ಮಾಣಕ್ಕಾಗಿ ಕಲ್ಲು ಸಂಗ್ರಹ ಆರಂಭ

Manjula VN
ಅಯೋಧ್ಯೆ: ವಿವಾದಿತ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಕಲ್ಲ ಸಂಗ್ರಹ ಕಾರ್ಯವನ್ನು ವಿಶ್ವ ಹಿಂದೂ ಪರಿಷತ್ (ವಿಹೆಚ್'ಪಿ) ಆರಂಭಿಸಿದೆ. 
ರಾಮ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಕೆಂಪು ಕಲ್ಲುಗಳನ್ನು ಸಂಗ್ರಹ ಮಾಡಿಲಾಗುತ್ತಿದೆ. ಕೆಂಪು ಕಲ್ಲುಗಳನ್ನು ಅಯೋಧ್ಯೆಯಲ್ಲಿ ಸಂಗ್ರಹಿಸಡಲಾಗುತ್ತಿದ್ದು, ಈ ಹಿಂದೆ ಕೂಡ ಕಲ್ಲುಗಳನ್ನು ತರಲಾಗಿತ್ತು. ಇದೀಗ ಮತ್ತೆ ಮೂರು ಟ್ರಕ್ ಗಳ ಮೂಲಕ ಕಲ್ಲುಗಳನ್ನು ತರಲಾಗಿದೆ. ಅಖಿಲೇಖ್ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಕಲ್ಲುಗಳನ್ನು ತರುವುದಕ್ಕೆ ನಿಷೇಧ ಹೇರಿದ್ದರು ಎಂದು ವಿಹೆಚ್ ಪಿ ಪ್ರತಿನಿಧಿ ಪ್ರಕಾಶ್ ಕುಮಾರ್ ಗುಪ್ತಾ ಅವರು ಹೇಳಿದ್ದಾರೆ. 
ರಾಮ ಮಂದಿರ ನಿರ್ಮಾಣಕ್ಕಾಗಿ ದೊಡ್ಡ ದೊಡ್ಡ ಕೆಂಪು ಕಲ್ಲುಗಳನ್ನು ತರಲಾಗುತ್ತಿದೆ. ಅಖಿಲೇಶ್ ಅವರ ಅಧಿಕಾರ ಮುಕ್ತಾಯಗೊಂಡಿದ್ದು, ಇದೀಗ ಯೋಗಿ ಆದಿತ್ಯಾನಾಥ್ ಸರ್ಕಾರ ಅಖಿಲೇಶ್ ಮಾಡಿದಂತೆ ಯಾವುದೇ ನಿರ್ಬಂಧವನ್ನು ಹೇರಿಲ್ಲ ಎಂದು ತಿಳಿಸಿದ್ದಾರೆ. 
SCROLL FOR NEXT