ಸ್ಪೇಸ್ ಜೆಟ್ ವಿಮಾನ ಡಿಕ್ಕಿ, ಇಂಡಿಗೊ ಬಸ್ ನಲ್ಲಿದ್ದ ಐವರಿಗೆ ಗಾಯ
ಸ್ಪೇಸ್ ಜೆಟ್ ವಿಮಾನದ ರೆಕ್ಕೆ ಇಂಡಿಗೊ ಬಸ್ ಗೆ ತಗುಲಿದ್ದರಿಂದ ಬಸ್ ನಲ್ಲಿದ್ದ ಐವರು ಪ್ರಯಾಣಿಕರಿಗೆ ಗಾಯಗಳಾಗಿದೆ...
ನವದೆಹಲಿ: ಸ್ಪೇಸ್ ಜೆಟ್ ವಿಮಾನದ ರೆಕ್ಕೆ ಇಂಡಿಗೊ ಬಸ್ ಗೆ ತಗುಲಿದ್ದರಿಂದ ಬಸ್ ನಲ್ಲಿದ್ದ ಐವರು ಪ್ರಯಾಣಿಕರಿಗೆ ಗಾಯಗಳಾಗಿದೆ.
ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೊ ವಿಮಾನ ಮುಂಬೈಗೆ ಹೊರಡಬೇಕಿತ್ತು. ಈ ವೇಳೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಗೆ ಲ್ಯಾಂಡ್ ಆಗುತ್ತಿದ್ದ ಸ್ಪೇಸ್ ಜೆಟ್ ವಿಮಾನದ ರೆಕ್ಕೆ ತಗುಲಿದೆ. ಇದರಿಂದ ಇಂಡಿಗೊ ಬಸ್ ಕಿಟಕಿಗಳು ಹೊಡೆದಿದೆ. ಈ ಘಟನೆಯಲ್ಲಿ ಐವರು ಪ್ರಯಾಣಿಕರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಪ್ರಕರಣ ಕುರಿತಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ತನಿಖೆಗೆ ಆದೇಶಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.