ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಬೀಫ್ ನಿಷೇಧ ಪರಿಣಾಮಕಾರಿ ಜಾರಿಗೆ ಮುಂದಾದ ಮಹಾರಾಷ್ಟ್ರ: ಶೀಘ್ರ ಬರಲಿದೆ ಬೀಫ್ ಡಿಟೆಕ್ಟರ್ ಕಿಟ್

ಕೇಂದ್ರ ಸರ್ಕಾರದ ಗೋಮಾಂಸ ನಿಷೇಧ ಕಾಯ್ದೆಯನ್ನು ಮಹಾರಾಷ್ಟ್ರದಲ್ಲಿ ಪರಿಣಾಮಕಾರಿಯಾಗಿ ಜಾರಿ ಮಾಡುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿರುವ ಮಹಾರಾಷ್ಟ್ರ ಪೊಲೀಸರು ಬೀಫ್ ಡಿಟೆಕ್ಟರ್ ಕಿಟ್ ಅನ್ನು ಬಳಕೆ ಮಾಡಲು ನಿರ್ಧರಿಸಿದ್ದಾರೆ.

ಸಂಗ್ರಹ ಚಿತ್ರ
Srinivasa Murthy VN
Updated On : 9 Jul 2017, 11:39 am

ಮುಂಬೈ: ಕೇಂದ್ರ ಸರ್ಕಾರದ ಗೋಮಾಂಸ ನಿಷೇಧ ಕಾಯ್ದೆಯನ್ನು ಮಹಾರಾಷ್ಟ್ರದಲ್ಲಿ ಪರಿಣಾಮಕಾರಿಯಾಗಿ ಜಾರಿ ಮಾಡುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿರುವ ಮಹಾರಾಷ್ಟ್ರ ಪೊಲೀಸರು ಬೀಫ್ ಡಿಟೆಕ್ಟರ್ ಕಿಟ್ ಅನ್ನು ಬಳಕೆ ಮಾಡಲು ನಿರ್ಧರಿಸಿದ್ದಾರೆ.

ಮಹಾರಾಷ್ಟ್ರದ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಈ ಬೀಫ್ ಡಿಟೆಕ್ಟರ್ ಕಿಟ್ ಗಳನ್ನು ತಯಾರಿಸಿದ್ದು, ಶೀಘ್ರದಲ್ಲೇ ಈ ಕಿಟ್ ಗಳನ್ನು ಮಹಾರಾಷ್ಟ್ರ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ. ಈ ನೂತನ ಕಿಟ್ ಗಳ ಮೂಲಕ  ಕೇವಲ 30 ನಿಮಿಷಗಳ ಅಂತರದಲ್ಲಿ ಬೀಫ್ ಮಾಂಸವನ್ನು ಕಂಡುಹಿಡಿಯಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ. ಪ್ರತಿಯೊಂದು ಕಿಟ್ ಗಳಲ್ಲಿಯೂ ಕೂಡ ಕನಿಷ್ಠ 100 ಮಾದರಿಗಳನ್ನು ಪರೀಕ್ಷೆ ಮಾಡಬಹುದಾಗಿದ್ದು, 45 ವಿಧಿವಿಜ್ಞಾನ  ಪ್ರಯೋಗಾಲಯದ ಸುಮಾರು 45 ವಾಹನಗಳಲ್ಲಿ ಪ್ರಯೋಗ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಒಂದು ವೇಳೆ ಪರೀಕ್ಷೆಯಲ್ಲಿ ಅದು ಗೋ ಮಾಂಸ ಎಂದು ಸಾಬೀತಾದರೆ ಆಗ ಮತ್ತೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿ ಡಿಎನ್ ಎ ಪರೀಕ್ಷೆ ಮಾಡಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾಹಿತಿ ನೀಡಿರುವ ವಿಧಿವಿಜ್ಞಾನ ಪ್ರಯೋಗಾಲಯ ನಿರ್ದೇಶಕ ಡಾ. ಕೃಷ್ಣ ಕುಲಕರ್ಣಿ ಅವರು, ಸ್ಥಳದಲ್ಲೇ ಬೀಫ್ ಪರೀಕ್ಷೆ ಮಾಡುವ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಕಿಟ್ ನಿಂದ ಕೇವಲ ಪ್ರಾಥಮಿಕ ಪರೀಕ್ಷೆ ಮಾತ್ರ  ಸಾಧ್ಯವಾಗಲಿದ್ದು, ಒಂದು ವೇಳೆ ಅದು ಗೋಮಾಂಸ ಎಂದು ತಿಳಿದರೆ ಮತ್ತೆ ಡಿಎನ್ ಎ ಪರೀಕ್ಷೆ ಮೂಲಕ ಸಂಪೂರ್ಣ ವಿವರ ಪಡೆಯಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಒಟ್ಟಾರೆ ದೇಶಾದ್ಯಂತ ಗೋರಕ್ಷಣೆ ಹೆಸರಲ್ಲಿ ಉಂಟಾಗುತ್ತಿರುವ ಗಲಭೆ ಮತ್ತು ಹಿಂಸಾಚಾರಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮಹಾರಾಷ್ಟ್ರ ಪೊಲೀಸರು ಕೈಗೊಂಡಿರುವ ವಿನೂತನ ಕ್ರಮಕ್ಕೆ ಎಲ್ಲಡೆ ಶ್ಲಾಘನೆಗೆ ಪಾತ್ರವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement