ಶಿರಡಿ: ಶಿರಡಿ ಸಾಯಿಬಾಬಾ ದೇವಾಲಯಕ್ಕೆ ಆಗ್ರ ಮೂಲದ ಭಕ್ತರೊಬ್ಬರಪ 2 ಕೆಜಿ ತೂಕದ ಚಿನ್ನದ ಪಾದುಕೆಗಳನ್ನು ಅರ್ಪಿಸಿದ್ದಾರೆ.
ಗುರು ಪೂರ್ಣಿಮೆ ಅಂಗವಾಗಿ ಸಂಧ್ಯಾ ಗುಪ್ತಾ ಪಾದುಕೆ ನೀಡಿದ್ದಾರೆ. ಚಿನ್ನದ ಪಾದುಕೆಗಳನ್ನು ಸರ್ವ ವಿಧಿ ವಿಧಾನಗಳೊಂದಿಗೆ ದ್ವಾರಕಮಾಯಿ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಶ್ರೀ ಸಾಯಿ ಸಂಸ್ಥಾನ ಟ್ರಸ್ಟ್ ನ ಸಚಿನ್ ತಾಂಬೆ ತಿಳಿಸಿದ್ದಾರೆ.
ಇನ್ನೂ ಶಿರಡಿಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ಜನರು ಆಗಮಿಸಿದ್ದಾರೆ. ಸಾಯಿಬಾಬಾ ಮಂದಿರವನ್ನು ಬಗೆಬಗೆಯ ಹಬವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.