ಭಜರಂಗ ದಳ (ಸಾಂದರ್ಭಿಕ ಚಿತ್ರ)
ಹಿಸ್ಸಾರ್: ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ್ ಯಾತ್ರಿಕರ ಮೇಲಿನ ಉಗ್ರ ದಾಳಿಯನ್ನು ಖಂಡಿಸಿ ಭಜರಂಗ ದಳ ಪ್ರತಿಭಟನೆ ನಡೆಸುತ್ತಿದ್ದು ಈ ವೇಳೆ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಲು ನಿರಾಕರಿಸಿದ ಮುಸ್ಲಿಂ ಮೌಲ್ವಿಗೆ ಕಪಾಳಕ್ಕೆ ಹೊಡೆದಿರುವ ಘಟನೆ ವರದಿಯಾಗಿದೆ.
ಹರಿಯಾಣದ ಹಿಸ್ಸಾರ್ ನಲ್ಲಿ ಭಜರಂಗ ದಳದವರು ನಗರದ ಬೀದಿಗಳಲ್ಲಿ ಪ್ರತಿಭಟನಾ ಜಾಥಾ ನಡೆಸುತ್ತಿದ್ದರು. ಈ ವೇಳೆ ಲಾಹೋರಿಯಾ ಚೌಕ್ ನ ಮಸೀದಿ ಮುಂದೆ ಬಂದಾಗ ಮಸೀದಿಯಲ್ಲಿದ್ದ ಮೌಲ್ವಿ ಹೊರ ಬಂದಿದ್ದಾನೆ. ಇದನ್ನು ಗಮನಿಸಿದ ಪ್ರತಿಭಟನಾಕಾರರು ಮೌಲ್ವಿಗೆ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವಂತೆ ಹೇಳಿದ್ದಾರೆ.
ಘೋಷಣೆ ಕೂಗಲು ಮೌಲ್ವಿ ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಭಜರಂಗ ದಳದ ಕಾರ್ಯಕರ್ತನೊಬ್ಬ ಮೌಲ್ವಿ ಕಪಾಳಕ್ಕೆ ಹೊಡೆದಿದ್ದಾನೆ. ಆಗ ಮೌಲ್ವಿ ಸುಮ್ಮನೆ ಮಸೀದಿ ಒಳಗಡೆ ಹೋಗಿದ್ದಾನೆ. ಇದನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.