ಪರಾಕ್ರಮ ಸುರಕ್ಷಾ ಖಸಗಿ ಭದ್ರತಾ ಸಂಸ್ಥೆಯ ಕಾರ್ಯಕ್ರಮದಲ್ಲಿ ಬಾಬಾ ರಾಮ್ ದೇವ್ 
ದೇಶ

ಖಾಸಗಿ ಭದ್ರತಾ ವ್ಯವಹಾರಕ್ಕೆ ಬಾಬಾ ರಾಮ್ ದೇವ್; 'ಸುರಕ್ಷಾ ಪರಾಕ್ರಮ' ಸಂಸ್ಥೆಗೆ ಚಾಲನೆ!

ದಿನಬಳಕೆ ವಸ್ತುಗಳ ತಯಾರಿಕೆ ಮಾಡಿ ಭಾರತೀಯ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿರುವ ಪತಂಜಲಿ ಸಂಸ್ಥೆಯ ಮುಖ್ಯಸ್ಥ ಯೋಗ ಗುರು ಬಾಬಾ ರಾಮ್ ದೇವ್ ಇದೀಗ ಹೊಸದೊಂದು ಸವಾಲಿಗೆ ಕೈಹಾಕಿದ್ದು, ತಮ್ಮದೇ ಪ್ರತ್ಯೇಕ ಖಾಸಗಿ ಭದ್ರತಾ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.

ಹರಿದ್ವಾರ: ದಿನಬಳಕೆ ವಸ್ತುಗಳ ತಯಾರಿಕೆ ಮಾಡಿ ಭಾರತೀಯ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿರುವ ಪತಂಜಲಿ ಸಂಸ್ಥೆಯ ಮುಖ್ಯಸ್ಥ ಯೋಗ ಗುರು ಬಾಬಾ ರಾಮ್ ದೇವ್ ಇದೀಗ ಹೊಸದೊಂದು ಸವಾಲಿಗೆ ಕೈಹಾಕಿದ್ದು,  ತಮ್ಮದೇ ಪ್ರತ್ಯೇಕ ಖಾಸಗಿ ಭದ್ರತಾ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.

ಆಹಾರ, ಸೌಂದರ್ಯ ವರ್ಧಕಗಳು, ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಮಾರುಕಟ್ಟೆಯಲ್ಲಿ ರಾಮದೇವ್​ ಅವರ ಪತಂಜಲಿ ಸಂಸ್ಥೆ ಮೊದಲ ಸ್ಥಾನದಲ್ಲಿದೆ. ಇದೀಗ ಈ ಪಟ್ಟಿಗೆ ಸೆಕ್ಯೂರಿಟಿ ಸಂಸ್ಥೆ ಹೊಸದಾಗಿ  ಸೇರ್ಪಡೆಯಾಗಿದೆ. ಪತಂಜಲಿ ಸಂಸ್ಥೆಯಿಂದ ನೂತನ ಸೆಕ್ಯೂರಿಟಿ ಸಂಸ್ಥೆಯನ್ನು ( ಖಾಸಗಿ ರಕ್ಷಣಾ ಸಂಸ್ಥೆ) ಆರಂಭಿಸಿದೆ ಎಂದು ರಾಮದೇವ್​ ಘೋಷಿಸಿದ್ದಾರೆ. ಇದಕ್ಕೆ ಪರಾಕ್ರಮ ಸುರಕ್ಷಾ ಪ್ರೈವೇಟ್ ಲಿಮಿಟೆಡ್ ಎಂದು  ಹೆಸರಿಸಲಾಗಿದೆ ಎಂದು ಟ್ವಿಟ್ಟರ್​ ಮೂಲಕ ರಾಮದೇವ್​ ಖಚಿತಪಡಿಸಿದ್ದಾರೆ.

ಇದಕ್ಕೆ ಜುಲೈ 10 ರಂದೇ ಚಾಲನೆ ದೊರೆತಿದೆ ಎಂದೂ ರಾಮ್ ದೇವ್ ಸ್ಪಷ್ಟಪಡಿಸಿದ್ದಾರೆ.

ವಿಶ್ವದಾದ್ಯಂತ ಯೋಗ ಗುರು ಎಂದೇ ಖ್ಯಾತಿ ಪಡೆದಿರುವ ಬಾಬಾ ರಾಮದೇವ್​ ತಾವೇ ಕಟ್ಟಿ ಬೆಳೆಸಿದ ಪತಂಜಲಿ ಸಂಸ್ಥೆ ಭಾರೀ ಯಶಸ್ಸು ಪಡೆದಿದೆ. ಇದೀಗ ಹೊಸ ಖಾಸಗಿ ಭದ್ರತಾ ಸಂಸ್ಥೆಯನ್ನು ಸ್ಥಾಪಿಸಿರುವ ರಾಮ್ ದೇವ್,  ಖಾಸಗಿ ಭದ್ರತಾ ಸಂಸ್ಥೆ ಕಟ್ಟುವ ಮೂಲಕ ದೇಶಕ್ಕಾಗಿ ಸ್ವಯಂ ರಕ್ಷಣಾ ವ್ಯಕ್ತಿತ್ವ ನಿರ್ಮಿಸುವುದೇ ನಮ್ಮ ಗುರಿಯಾಗಿದೆ ಎಂದು ರಾಮದೇವ್​ ಹೇಳಿದ್ದಾರೆ. ಇದರಲ್ಲಿ ನಿವೃತ್ತ ಯೋಧರು ಹಾಗೂ ಪೊಲೀಸರನ್ನು ಕರೆಯಲಾಗಿದೆ. ಅಲ್ಲದೇ  ಯುವ ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಇವರೆಲ್ಲರಿಗೂ ಹರಿದ್ವಾರದಲ್ಲಿ ಪತಂಜಲಿ ಸಂಸ್ಥೆಯ ಕಟ್ಟಡದಲ್ಲೇ ತರಬೇತಿ ನೀಡಲಾಗುತ್ತಿದೆ ಎಂದು ರಾಮ್ ದೇವ್ ಟ್ವೀಟ್ ಮಾಡಿದ್ದಾರೆಯ

ರಾಮದೇವ್​ ಅವರ ಪತಂಜಲಿ ಸಂಸ್ಥೆ ಕಳೆದ ವರ್ಷ 1,100 ಕೋಟಿ ರು ಆದಾಯ ಗಳಿಸಿತ್ತು. ಇದೇ ವರ್ಷ ಸಿಇಒ ಆಚಾರ್ಯ ಬಾಲಕೃಷ್ಣ ಅವರು ದೇಶದ ಅತಿ ಶ್ರೀಮಂತರ ಪಟ್ಟಿಯಲ್ಲಿ 25ನೇ ಸ್ಥಾನ ಪಡೆದಿದ್ದರು ಎಂಬುದನ್ನು ಇಲ್ಲಿ  ಸ್ನರಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!