ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ರದ್ದುಗೊಂಡ 500, 1000 ರೂ ಮುಖಬೆಲೆಯ ನೋಟುಗಳನ್ನು ಇನ್ನೂ ಎಣಿಕೆ ಮಾಡುತ್ತಿದ್ದೇವೆ ಎಂದು ಸಂಸದೀಯ ಸಮಿತಿಗೆ ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಪ್ರತಿಕ್ರಿಸಿಯಿಸಿರುವ ರಾಹುಲ್, ಕೇಂದ್ರ ಸರ್ಕಾರಕ್ಕೆ ಗಣಿತ ಶಿಕ್ಷಕರ ಅವಶ್ಯಕತೆಯಿದೆ ಎಂದು ಟೀಕಿಸಿದ್ದಾರೆ.
ಭಾರತ ಸರ್ಕಾರ ಗಣಿತ ಶಿಕ್ಷಕರ ಹುಡುಕಾಟದಲ್ಲಿದೆ. ದಯಮಾಡಿ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಜು.12 ರಂದು ಸಂಸದೀಯ ಸಮಿತಿ ಸಭೆಗೆ ಹಾಜರಾಗಿದ್ದ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಆರ್ ಬಿ ಐ ಪ್ರತಿನಿಧಿಗಳು, ಬ್ಯಾಂಕ್ ಗಳಿಗೆ ವಾಪಸ್ ಬಂದಿರುವ ರದ್ದುಗೊಂಡಿದ್ದ ನೋಟುಗಳ ಎಣಿಕೆ ಕಾರ್ಯ ಮಾಡುತ್ತಿದ್ದಾರೆ. ಕೆಲಸದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲು ಹೊಸ ಕರೆನ್ಸಿ ವೇರಿಫಿಕೇಷನ್ ಪ್ರೊಸೆಸಿಂಗ್ ಸಿಸ್ಟಂ (ಸಿವಿಪಿಎಸ್) ನ್ನು ಖರೀದಿಸಲು ಟೆಂಡರ್ ಕರೆಯಲಾಗಿದೆ ಎಂದು ಉರ್ಜಿತ್ ಪಟೇಲ್ ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಪಿ.ಚಿದಂಬರಂ ಸರ್ಕಾರ ಲೀಸ್ ಪಡೆಯುವಾಗ ಏಕೆ ಹೆಚ್ಚಿನ ಪ್ರಮಾಣದ ಯಂತ್ರಗಳನ್ನು ಖರೀದಿಸಿಲು ಬಯಸಿತ್ತು ಎಂಬುದರಕ ಬಗ್ಗೆ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.