ಮಹಿಳೆ ಥಳಿಸುತ್ತಿರುವ ಮೈದುನ ಮತ್ತು ಆತನ ಸ್ನೇಹಿತರು 
ದೇಶ

ಅಮಾನುಷ: ಹೆಣ್ಣು ಮಗುವಿಗೆ ಜನ್ಮ ನೀಡಿದಳೆಂದು ಮನಸೋ ಇಚ್ಛೆ ಥಳಿತ!

ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂಬ ಒಂದೇ ಕಾರಣದಿಂದಾಗಿ ಮಹಿಳೆಯೊಬ್ಬಳನ್ನು ಮನೆಯವರೇ ಮನಸೋ ಇಚ್ಛೆ ಥಳಿಸಿರುವ ಘಟನೆ ಪಂಜಾಬ್ ಪಾಟಿಯಾಲದಲ್ಲಿ ನಡೆದಿದೆ.

ಪಾಟಿಯಾಲ: ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂಬ ಒಂದೇ ಕಾರಣದಿಂದಾಗಿ ಮಹಿಳೆಯೊಬ್ಬಳನ್ನು ಮನೆಯವರೇ ಮನಸೋ ಇಚ್ಛೆ ಥಳಿಸಿರುವ ಘಟನೆ ಪಂಜಾಬ್ ಪಾಟಿಯಾಲದಲ್ಲಿ ನಡೆದಿದೆ.

ಪಾಟಿಯಾಲ ನಿವಾಸಿ ಮೀನಾ ಕಶ್ಯಪ್ ಎಂಬುವವರು ಹಲ್ಲೆಗೊಳಗಾದ ಮಹಿಳೆಯಾಗಿದ್ದು, ವರ್ಷಗಳ ಹಿಂದಷ್ಟೇ ಮೀನಾ ದಲ್ಜೀತ್ ಸಿಂಗ್ ಎಂಬುವವರನ್ನು ವಿವಾವವಾಗಿದ್ದರು. ಇತ್ತೀಚೆದೆ ಮೀನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.  ಆದರೆ ಹೆಣ್ಣು ಮಗು ಜನಿಸುವುದು ಇಷ್ಟವಿರದ ಮನೆ ಸಿಬ್ಬಂದಿ ವರದಕ್ಷಿಣೆ ನೆಪವೊಡ್ಡಿ ಮಹಿಳೆ ಮನಸೋ ಇಚ್ಛೆ ಥಳಿಸಿದ್ದಾರೆ. ಗಂಡನ ಸಹೋದರರು ಹಾಗೂ ಆವರ ಸ್ನೇಹಿತರು ಮಹಿಳೆಗೆ ಥಳಿಸಿದ್ದು, ನೆರೆಮನೆಯೊಬ್ಬರು ಈ ಥಳಿತ  ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ದಾಖಲಿಸಿ ಸಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.

ಹೆಣ್ಣು ಮಗು ಜನಿಸಿದ ಬಳಿಕ ಆಕೆಯನ್ನು ಕುಟುಂಬದೊಳಗೆ ಸೇರಿಸಿಕೊಳ್ಳಲು ಕುಟುಂಬ ನಿರಾಕರಿಸಿದ್ದರಿಂದ ಆಕೆ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಳು. ಅದಾಗ್ಯೂ ಆಕೆಯನ್ನು ಬಿಡದ ಗಂಡನ ಸಹೊದರರು ವರದಕ್ಷಿಣೆಗಾಗಿ ನಿತ್ಯ  ಕಿರುಕುಳು ನೀಡುತ್ತಿದ್ದರು ಎಂದು ತಿಳಿದುಬಂದಿದೆ. ನಿನ್ನೆ ಏಕಾಏಕಿ ಮೀನಾ ಅವರ ನಿವಾಸಕ್ಕೆ ಆಗಮಿಸಿದ ಆಕೆಯ ಮೈದುನ ಹಾಗೂ ಆತನ ಸ್ನೇಹಿತರು ಹಾಕಿ ಬ್ಯಾಟ್ ಮತ್ತು ಇತರೆ ದೊಣ್ಣೆಗಳಿಂದ ಆಕೆಯನ್ನು ಮನಸೋ ಇಚ್ಛೆ  ಥಳಿಸಿದ್ದಾರೆ.

ಈ ವಿಡಿಯೋ ಇದೇಗ ವೈರಲ್ ಆಗಿದ್ದು, ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬರುತ್ತಿದೆ. ಅಂತೆಯೇ ಮಾಧ್ಯಮಗಳಲ್ಲೂ ಈ ವಿಡಿಯೋ ಪ್ರಸಾರವಾಗಿದ್ದು, ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರವಾದ ಬೆನ್ನಲ್ಲೇ ಪೊಲೀಸರು ದೂರು  ದಾಖಲಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಸಂತ್ರಸ್ತ ಮಹಿಳೆಯ ತಂದೆ ಹೇಳಿಕೆ ನೀಡಿದ್ದು, ಮೀನಾಳ ಗಂಡ ಹಾಗೂ ಆಕೆಯ ಮೈದುನ ವರದಕ್ಷಿಣೆ ಹಣಕ್ಕಾಗಿ ನಿತ್ಯ ಕಿರುಕುಳ  ನೀಡುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?