ದೇಶ

ಸ್ಫೋಟಕ ವಸ್ತುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ನೀಡಿಲ್ಲ: ಉತ್ತರಪ್ರದೇಶ ಸರ್ಕಾರ ಸ್ಫಷ್ಟನೆ

Manjula VN
ಲಖನೌ: ವಿಧಾನಸಭೆಯಲ್ಲಿ ದೊರಕಿದ್ದ ಸ್ಫೋಟಕ ವಸ್ತುಗಳನ್ನು ಆಗ್ರಾ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್)ಕ್ಕೆ ಕಳುಹಿಸಿಲ್ಲ ಎಂದು ಉತ್ತರಪ್ರದೇಶ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ. 
ಈ ಕುರಿತಂತೆ ಸ್ಪಷ್ಟನೆ ನೀಡಿರುವ ಉತ್ತರಪ್ರದೇಶ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ವಸ್ತುಗಳನ್ನು ಪರೀಕ್ಷೆ ನಡೆಸಲು ಸೌಕರ್ಯ ಹಾಗೂ ಯಂತ್ರಗಳಿಲ್ಲದಿರುವುದರಿಂದ ಆಗ್ರಾ ವಿಧಿವಿಜ್ಞಾನ ಪ್ರಯೋಗಾಲಕ್ಕೆ ಯಾವುದೇ ರೀತಿಯ ಸ್ಫೋಟಕ ವಸ್ತುಗಳ ಮಾದರಿಗಳನ್ನು ಕಳುಹಿಸಿಲ್ಲ ಎಂದು ಹೇಳಿದ್ದಾರೆ. 
ಉತ್ತರಪ್ರದೇಶ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮೊದಲ ಬಾರಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯ ಬಜೆಟ್ ಘೋಷಣೆ ಮಾಡಿದ್ದು. ಇದರಂತೆ ಜು.14 ರಂದು ಬಜೆಟ್ ಅಧಿವೇಶನ ನಡೆಸಲಾಗುತ್ತಿತ್ತು. ಅಧಿವೇಶನಕ್ಕೂ ಮುನ್ನ ಭದ್ರತೆ ಪರಿಶೀಲನೆ ವೇಳೆ ವಿರೋಧ ಪಕ್ಷದ ನಾಯಕರೊಬ್ಬರ ಕುರ್ಚಿಯ ಕೇಳಗೆ ಪಿಇಟಿಎನ್ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದವು. ಇದು ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. 

ವಿಧಾನಸಭೆಯಲ್ಲಿ ಸಿಕ್ಕ ಪಿಇಟಿಎನ್ ಸ್ಫೋಟಕ ವಸ್ತುಗಳನ್ನು ರಾಜ್ಯ ಸರ್ಕಾರ ಆಗ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅವುಗಳು ಸ್ಫೋಟಕ ವಸ್ತುಗಳಲ್ಲ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. 

ಈ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಉತ್ತರಪ್ರದೇಶ ರಾಜ್ಯ ಸರ್ಕಾರ, ಸ್ಫೋಟಕ ವಸ್ತುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಲ್ಲ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದೆ.

ಸ್ಫೋಟಕ ಮಾದರಿಗಳನ್ನು ಲಖನೌ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಈಗಗಾಲೇ 2 ಪರೀಕ್ಷೆಗಳನ್ನು ನಡೆಸಲಾಗಿದೆ. ಕೆಲ ವಸ್ತುಗಳಲ್ಲಿ ನೈಟ್ರೇಟ್ ಇರುವುದು ಖಚಿತವಾಗಿದೆ. ಇಲ್ಲದೆ, ಸ್ಫೋಟಕ ವಸ್ತುಗಳಿರುವುದೂ ಕೂಡ ಖಚಿತವಾಗಿದೆ, ಇನ್ನು ಕೆಲವೇ ದಿನಗಳಲ್ಲಿ ಪರೀಕ್ಷೆಯ ವರದಿಗಳು ಬರಲಿದ್ದು, ವರದಿ ಬಳಿಕವಷ್ಟೇ ಸ್ಪಷ್ಟ ಮಾಹಿತಿಗಳು ಬಹಿರಂಗೊಳ್ಳಲಿವೆ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ. 
SCROLL FOR NEXT