ಸಂಗ್ರಹ ಚಿತ್ರ 
ದೇಶ

ಯುಪಿಎ ಉಪರಾಷ್ಟ್ರಪತಿ ಅಭ್ಯರ್ಥಿ ಗೋಪಾಲ್ ​ಕೃಷ್ಣ ಗಾಂಧಿಗೆ ಶಿವಸೇನೆ ವಿರೋಧ!

ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿರುವ ಬೆನ್ನಲ್ಲೇ ಯುಪಿಎ ಅಭ್ಯರ್ಥಿ ಗೋಪಾಲ್ ಕೃಷ್ಣ ಗಾಂಧಿ ಅವರ ಆಯ್ಕೆಯನ್ನು ಶಿವಸೇನೆ ತೀವ್ರವಾಗಿ ವಿರೋಧಿಸಿದೆ.

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿರುವ ಬೆನ್ನಲ್ಲೇ ಯುಪಿಎ ಅಭ್ಯರ್ಥಿ ಗೋಪಾಲ್ ಕೃಷ್ಣ ಗಾಂಧಿ ಅವರ ಆಯ್ಕೆಯನ್ನು ಶಿವಸೇನೆ ತೀವ್ರವಾಗಿ ವಿರೋಧಿಸಿದೆ.

1993ರ ಮುಂಬೈ ಸ್ಪೋಟದ ಅಪರಾಧಿ ಯಾಕುಬ್ ಮೆನನ್​ ಗೆ ಮರಣ ದಂಡನೆ ವಿಧಿಸಿದ್ದನ್ನು ಗೋಪಾಲಕೃಷ್ಣ ವಿರೋಧಿಸಿದ್ದರು. ಈ ಸಂಬಂಧ ಅವರು ರಾಷ್ಟ್ರಪತಿಗೆ ಪತ್ರ ಕೂಡ ಬರೆದಿದ್ದರು. ಇಂಥಹ ಮನಸ್ಥಿತಿಯಿರುವ  ವ್ಯಕ್ತಿಯನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿಸಿರುವ ವಿರೋಧ ಪಕ್ಷಗಳು ಇದಕ್ಕೆ ಉತ್ತರಿಸಬೇಕು ಎಂದು ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಹೇಳಿದ್ದಾರೆ.

ಉಗ್ರ ಯಾಕೂಬ್ ಮೆಮನ್ ಮರಣ ದಂಡನೆಯನ್ನು ತಪ್ಪಿಸುವ ಅರ್ಜಿ ಸಲ್ಲಿಸಿದವರ ಪೈಕಿ ಗೋಪಾಲ್ ಕೃಷ್ಣ ಗಾಂಧಿ ಕೂಡ ಪ್ರಮುಖರಾಗಿದ್ದರು. ಯಾಕೂಬ್ ಮೆಮನ್ ನನ್ನು ರಕ್ಷಿಸುವ ಸಲುವಾಗಿ ಗೋಪಾಲ್ ಕೃಷ್ಣ ಗಾಂಧಿ ತಮ್ಮ ಎಲ್ಲ  ಅಧಿಕಾರವನ್ನೂ ಪ್ರಯೋಗಿಸಿದ್ದರು. ಈ ಬಗ್ಗೆ ರಾಷ್ಟ್ರಪತಿ ಅವರಿಗೂ ಪತ್ರ ಬರೆದಿದ್ದರು, ಇಂತಹ ಮನಸ್ಸಿನ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷ ಅದು ಹೇಗೆ ಪ್ರಮುಖ ಹುದ್ದೆಗೆ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ ಎಂದು ರಾವತ್  ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಆಯ್ಕೆ ಉತ್ತಮವಾಗಿದೆ: ಶಿವಸೇನೆ ಆನಂದ್ ಶರ್ಮಾ ತಿರುಗೇಟು
ಇನ್ನು ಶಿವಸೇನೆ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ತಮ್ಮ ಆಯ್ಕೆ ಉತ್ತಮವಾಗಿದ್ದು, ಅಹಿಂಸೆಯನ್ನು ಪ್ರತಿಪಾದಿಸುವ ಗಾಂಧಿವಾದಿಯನ್ನು ತಮ್ಮ ಅಭ್ಯರ್ಥಿಯನ್ನಾಗಿಸಿದ್ದೇವೆ. ಶಿವಸೇನೆ ಅದ್ಯಾವ  ಮಾನದಂಡದ ಮೇಲೆ ಗೋಪಾಲಕೃಷ್ಣ ಗಾಂಧಿ ಅವರನ್ನು ವಿರೋಧಿಸುತ್ತಿದೆಯೋ ತಿಳಿಯುತ್ತಿಲ್ಲ. ಗೋಪಾಲ್ ಕೃಷ್ಣ ಗಾಂಧಿ ಅವರು ಗಾಂಧಿ ಸಂತತಿಯವರು, ಪ್ರಮುಖವಾಗಿ ಮಹಾತ್ಮಾ ಗಾಂಧಿ ಅವರ ಅಹಿಂಸಾ ತತ್ವವನ್ನೇ  ಅಳವಡಿಸಿಕೊಂಡು ಬಂದವರು. ಇದೇ ಕಾರಣಕ್ಕೆ ಗಲ್ಲು ಶಿಕ್ಷೆ ಅವರು ವಿರೋಧಿಸಿದ್ದರು. ಮೊದಲು ನೀವು ನೋಡುತ್ತಿರುವ ದೃಷ್ಣಿಕೋನವನ್ನು ಬದಲಾಯಿಸಿ ಎಂದು ಆನಂದ್ ಶರ್ಮಾ ತಿರುಗೇಟು ನೀಡಿದ್ದಾರೆ.

2015ರ ಜುಲೈ ನಲ್ಲಿ ಗೋಪಾಲ್ ಕೃಷ್ಣ ಗಾಂಧಿ ಉಗ್ರ ಯಾಕೂಬ್ ಮೆಮನ್ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದರು.

ಇಂದು ಗೋಪಾಲ್ ​ಕೃಷ್ಣ ಗಾಂಧಿ ನಾಮಪತ್ರ ಸಲ್ಲಿಕೆ
18 ವಿರೋಧ ಪಕ್ಷಗಳ ಒಮ್ಮತದ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಗೋಪಾಲಕೃಷ್ಣ ಗಾಂಧಿ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಪ್ರಮುಖ ವಿರೋಧ ಪಕ್ಷಗಳ ನಾಯಕರ ನೇತೃತ್ವದಲ್ಲಿ ಮಂಗಳವಾರ  ನಾಮಪತ್ರ ಸಲ್ಲಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!

Nepal Floods: ‘ಸಾವಿನ ಸಂಖ್ಯೆ ಊಹೆಗೂ ನಿಲುಕದಷ್ಟು ಏರಬಹುದು’; ಚೀನಾ ನಡೆ ಕುರಿತು ನೇಪಾಳ ಮಾಜಿ ಸಚಿವರ ಅನುಮಾನ!

RSS ಪಥಸಂಚಲನದಲ್ಲಿ ಭಾಗಿ: ಯಾದಗಿರಿಯ ಇಬ್ಬರು ಸರ್ಕಾರಿ ಶಿಕ್ಷಕರ ಅಮಾನತು

ಮಣಿಪುರದಲ್ಲಿ ಉಗ್ರರ ಅಟ್ಟಹಾಸ: ನಾಲ್ವರ ಸಾವು, ಒಬ್ಬ ನಾಪತ್ತೆ