ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಮತ್ತು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಎನ್ ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದು, ವೆಂಕಯ್ಯ ನಾಯ್ಡು ಅವರ ರಾಜೀನಾಮೆಯಿಂದ ತೆರವುಗೊಂಡಿರುವ ಸಚಿವಾಯಲದ ಹೊಣೆಯನ್ನು ಸ್ಮೃತಿ ಇರಾನಿ ಹಾಗೂ ಎನ್ಎಸ್ ತೋಮರ್ ಅವರಿಗೆ ನೀಡಲಾಗಿದೆ.
ಜವಳಿ ಖಾತೆ ಸಚಿವರಾಗಿರುವ ಸ್ಮೃತಿ ಇರಾನಿ ಅವರಿಗೆ ಮಾಹಿತಿ ಮತ್ತು ಪ್ರಸಾರ ಖಾತೆಯ ಹೊಣೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದ್ದು, ನಗರಾಭಿವೃದ್ಧಿ ಖಾತೆಯ ಹೊಣೆಯನ್ನು ಎನ್ ಎಸ್ ತೋಮರ್ ಅವರಿಗೆ ನೀಡಲಾಗಿದೆ. ಎನ್ ಎಸ್ ತೋಮರ್ ಪ್ರಸ್ತುತ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಾಗಿದ್ದು, ಹೆಚ್ಚುವರಿಯಾಗಿ ನಗರಾಭಿವೃದ್ಧಿ ಖಾತೆಯನ್ನೂ ವಹಿಸಲಾಗಿದೆ.