ನವದೆಹಲಿ: ಡೋಕ್ಲಾಮ್ ವಿವಾದ ಮತ್ತಷ್ಟು ಜಟಿಲಗೊಳ್ಳುತ್ತಿದ್ದಂತೆಯೇ ಚೀನಾ ಸೇನಾ ವಾಹನ, ಉಪಕರಣಗಳನ್ನು ಟಿಬೇಟ್ ಗೆ ಸಾಗಿಸಿದೆ.
ಉತ್ತರ ಟಿಬೇಟ್ ನ ಕುನ್ಲುನ್ ಪರ್ವತಗಳ ಭಾಗದಲ್ಲಿ ಚೀನಾ ಸಾವಿರ ಟನ್ ಗಳ ಸೇನಾ ಉಪಕರಣ ಹಾಗೂ ವಾಹನಗಳನ್ನು ನಿಯೋಜಿಸಲು ಪ್ರಾರಂಭಿಸಿದ್ದು, ರೈಲು ಹಾಗೂ ರಸ್ತೆ ಮಾರ್ಗವಾಗಿ ವಾಹನ, ಸೇನಾ ಉಪಕರಣಗಳನ್ನು ಚೀನಾ ಸೇನೆ ಸಾಗಿಸುತ್ತಿದ್ದು, ಕಳೆದ ತಿಂಗಳೇ ಈ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಹಾಂಕ್ ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಟಿಸಿದೆ.
ಟಿಬೇಟ್ ಗೆ ಸೇನಾ ವಾಹನ ಹಾಗೂ ಉಪಕರಣಗಳನ್ನು ನಿಯೋಜಿಸುವುದಷ್ಟೇ ಅಲ್ಲದೇ ಡೊಕ್ಲಾಮ್ ವಿವಾದ ಉಂಟಾದ ಕೆಲದಿನಗಳ ನಂತರ ಚೀನಾ ಟಿಬೆಟ್ ನಲ್ಲಿ ಸಮಾರಾಭ್ಯಸ ನಡೆಸಿತ್ತು.