ವಿಜಯ್ ಮಲ್ಯ 
ದೇಶ

ಲಂಡನ್ ನಲ್ಲಿ ಇಡಿ ಅಧಿಕಾರಿಗಳು, ವಿಜಯ್ ಮಲ್ಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ವಿವಿಧ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಮರು ಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ....

ನವದೆಹಲಿ: ವಿವಿಧ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಮರು ಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಮದ್ಯದ ದೊರೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳ ತಂಡ ಲಂಡನ್ ಗೆ ತೆರಳಿದ್ದಾರೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಓರ್ವ ಕಾನೂನು ಸಲಹೆಗಾರ ಸೇರಿದಂತೆ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳು ಕಳೆದ ಸೋಮವಾರವೇ ಲಂಡನ್ ಗೆ ತೆರಳಿದ್ದು, ಚಾರ್ಜ್ ಶೀಟ್ ಸಲ್ಲಿಸಿ ನಾಳೆ ಭಾರತಕ್ಕೆ ವಾಪಸ್ ಆಗಲಿದ್ದಾರೆ ಎಂದು ಇಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿಜಯ್ ಮಲ್ಯ ಹಸ್ತಾಂತರ ಪ್ರಕರಣದಲ್ಲಿ ಭಾರತದ ಪರವಾಗಿ ವಾದಿಸುತ್ತಿರುವ ಕ್ರೌನ್ ಪ್ರಾಸಿಕ್ಯೂಷನ್ ಕಚೇರಿಗೆ ಇಡಿ ಅಧಿಕಾರಿಗಳ ತಂಡ ಸುಮಾರು 5,500 ಪುಟಗಳ ಚಾರ್ಜ್ ಶೀಟ್ ಹಾಗೂ ಇತರೆ ದಾಖಲೆಗಳನ್ನು ಸಲ್ಲಿಸಿದೆ. 
ವಿಜಯ್ ಮಲ್ಯ ಅವರು ಐಡಿಬಿಐ ಬ್ಯಾಂಕ್ ನಿಂದ ಪಡೆದ 900 ಕೋಟಿ ರುಪಾಯಿ ಸಾಲವನ್ನು ಕಾನೂನು ಬಾಹಿರವಾಗಿ ಹೇಗೆ ವಿದೇಶಕ್ಕೆ ವರ್ಗಾವಣೆ ಮಾಡಿದ್ದಾರೆ ಎಂಬುದರ ಬಗ್ಗೆ ಚಾರ್ಜ್ ಶೀಟ್ ನಲ್ಲಿ ವಿವರಿಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಕಿಂಗ್ ಫಿಶರ್ ಏರ್ ಲೈನ್ಸ್ ಹಾಗೂ ಐಡಿಬಿಐ ಬ್ಯಾಂಕ್ ಅಧಿಕಾರಿಗಳ ಪಾತ್ರವನ್ನು ವಿವರಿಸಲಾಗಿದೆ ಎಂದಿದ್ದಾರೆ.
ಕಳೆದ ವರ್ಷ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ವಿಜಯ್ ಮಲ್ಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದ ಇಡಿ, ಮದ್ಯದ ದೊರೆಗೆ ಸಂಬಂಧಿಸಿದ ಸುಮಾರು 9,600 ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶದಲ್ಲಿ ಇಂಧನ ಕೊರತೆ ಇಲ್ಲ, ಆದ್ರೆ...: ಪ್ರಧಾನಿ ಮೋದಿ ಹೇಳಿಕೆಗೆ ಕಾರಣ ನೀಡಿದ IGoM

ದಶಕದ ಬಳಿಕ ಭುವನೇಶ್ವರ್ ಸಿಡಿಸಿದ ಸಿಕ್ಸ್​ ಮೌಲ್ಯ '99 ಲಕ್ಷ ರೂ.’; MI ಪಂದ್ಯ RCB ಗೆಲ್ಲೋದಿಲ್ಲ ಎಂಬ ಭವಿಷ್ಯ ಸುಳ್ಳಾಗಿಸಿದ ಭುವಿ, Video!

Explainer: ಮಿತವ್ಯಯಕ್ಕೆ ಮೋದಿ ಕರೆ: ಕಷ್ಟದ ದಿನಗಳೋ? ಫಾರೆನ್ಸ್ ಉಳಿಕೆಯ ಮರ್ಮವೋ..? 72ಬಿಲಿಯನ್ $ ಹಿಂದಿನ ರಹಸ್ಯ

Video: ಆರಂಭದಲ್ಲೇ TVK ಸರ್ಕಾರಕ್ಕೆ ವಿಘ್ನ: ತಮಿಳುನಾಡಿನ ಏಕೈಕ ಮಹಿಳಾ ಸಚಿವೆ ಎಸ್. ಕೀರ್ತನಾ ಪ್ರಮಾಣವಚನಕ್ಕೆ ಬ್ರೇಕ್, Video!

ಪಟೇಲ್ ಹುಡುಗಿಯರು ಬೇರೆ ಜಾತಿ ಹುಡುಗರನ್ನು ಮದುವೆಯಾಗುತ್ತಿದ್ದಾರೆ, ಏಕೆಂದರೆ...: UP ರಾಜ್ಯಪಾಲರ ಪುತ್ರಿ ಶಾಕಿಂಗ್ ಹೇಳಿಕೆ

SCROLL FOR NEXT