ದಿವಾಕರ್ ರೆಡ್ಡಿ 
ದೇಶ

ಟಿಡಿಪಿ ಸಂಸದ ದಿವಾಕರ್‌ ರೆಡ್ಡಿ ನಿಷೇಧ ಹಿಂಪಡೆದ ಇಂಡಿಗೊ

ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಜೊತೆ ದುರ್ವತನೆ ತೋರಿದ್ದಕ್ಕಾಗಿ ಟಿಡಿಪಿ ಸಂಸದ ದಿವಾಕರ್‌ ರೆಡ್ಡಿ ಅವರಿಗೆ ವಿಧಿಸಿದ್ದ ....

ನವದೆಹಲಿ: ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಜೊತೆ ದುರ್ವತನೆ ತೋರಿದ್ದಕ್ಕಾಗಿ ಟಿಡಿಪಿ ಸಂಸದ ದಿವಾಕರ್‌ ರೆಡ್ಡಿ ಅವರಿಗೆ ವಿಧಿಸಿದ್ದ ನಿಷೇಧವನ್ನು ಬುಧವಾರ ಇಂಡಿಗೊ ವಿಮಾನಯಾನ ಸಂಸ್ಥೆ ಹಿಂಪಡೆದಿದೆ.
ಜೂನ್‌ 15ರಂದು ದಿವಾಕರ್‌ ರೆಡ್ಡಿ ಅವರು ವಿಶಾಖಪಟ್ಟಣ ವಿಮಾನ ನಿಲ್ದಾಣದಲ್ಲಿ ಇಂಡಿಗೊ ಸಂಸ್ಥೆಯ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಈ ಕಾರಣಕ್ಕೆ ದಿವಾಕರ್ ರೆಡ್ಡಿ ಅವರ ವಿಮಾನ ಪ್ರಯಾಣದ ಮೇಲೆ ಇಂಡಿಗೊ ಸೇರಿದಂತೆ ಹಲವು ನಾಗರಿಕ ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿದ್ದವು.
ದಿವಾಕರ್‌ ರೆಡ್ಡಿ ಅವರ ವಿಮಾನ ಪ್ರಮಾಣ ನಿಷೇಧ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಸಂಸದ ವೈ.ಎಸ್‌. ಚೌಧರಿ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಇಂಡಿಗೊ ಸಂಸ್ಥೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಔತಣಕೂಟದಲ್ಲಿ ದಿವಾಕರ್‌ ರೆಡ್ಡಿ ಮತ್ತು ಇಂಡಿಗೊ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾತುಕತೆ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. 
ದಿವಾಕರ್‌ ರೆಡ್ಡಿ ಅವರ ವಿಮಾನ ಪ್ರಮಾಣದ ಮೇಲಿನ ನಿಷೇಧವನ್ನು ವಾಪಸ್‌ ತೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿರುವ ಇಂಡಿಗೋ, ಈ ವಿಷಯವನ್ನು ಭಾರತೀಯ ವಿಮಾನಯಾನ ಸಂಸ್ಥೆಗಳ ಸಂಘಟನೆಯ (ಎಫ್‌ಐಎ) ಗಮನಕ್ಕೂ ತರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT