ನವದೆಹಲಿ: ಆಧಾರ್ ನೋಂದಣಿ ಮಾಡುವ ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಎಂಆಧಾರ್ ಎಂಬ ಆಪ್ ನ್ನು ಬಿಡುಗಡೆ ಮಾಡಿದ್ದು, ಇನ್ನು ಮುಂದೆ ಆಧಾರ್ ಕಾರ್ಡ್ ಹೊಂದಿರುವವರು ಮೊಬೈಲ್ ನಲ್ಲೇ ವಿಶಿಷ್ಟ ಗುರುತಿನ ಪ್ರೊಫೈಲ್ ಹೊಂದಬಹುದಾಗಿದೆ.
ಪ್ರಸ್ತುತ ಆಂಡ್ರಾಯ್ಡ್ ನಲ್ಲಿ ಮಾತ್ರ ಎಂ ಆಧಾರ್ ಆಪ್ ಲಭ್ಯವಿದ್ದು, ಆಧಾರ್ ಕಾರ್ಡ್ ನ್ನು ಮೊಬೈಲ್ ಮೂಲಕವೇ ಬಳಕೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೇ ಆಪ್ ನಲ್ಲಿ ದಾಖಲಾಗಿರುವ ತಮ್ಮ ಬಯೋಮೆಟ್ರಿಕ್ ವಿವರಣೆಗಳನ್ನು ಗೌಪ್ಯವಾಗಿಡುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
ಕ್ಯು ಆರ್ ಕೋಡ್ ಮೂಲಕ ಅಪ್ ಡೇಟೆಡ್ ಆಧಾರ್ ಪ್ರೊಫೈಲ್ ನ್ನು ವೀಕ್ಷಿಸುವುದು, 2 ಡಿ ಬಾರ್ ಕೋಡ್, ಎಲೆಕ್ಟ್ರಾನಿಕ್ ಕೆವೈಸಿ ಹಂಚಿಕೆ ಆಯ್ಕೆಗಳನ್ನು ನೀಡಲಾಗಿದ್ದು, ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಿಂದ ಆಪ್ ನ್ನು ಡೌನ್ ಲೋಡ್ ಮಾಡಬಹುದಾಗಿದೆ.