ದೇಶ

ಐಎಸ್, ಅಲ್ ಖೈದಾ ಉಗ್ರ ಸಂಘಟನೆಗಳ ಉಗ್ರರು, ಸಹ ಸಂಘಟನೆಗಳಿಗೆ ವಿಶ್ವಸಂಸ್ಥೆ ನಿರ್ಬಂಧ

Srinivas Rao BV
ವಿಶ್ವಸಂಸ್ಥೆ: ಅಲ್ ಖೈದಾ, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ಉಗ್ರರು ಹಾಗೂ ಸಹ ಸಂಘಟನೆಗಳಿಗೆ ನಿರ್ಬಂಧ ವಿಧಿಸುವುದರ ಸಂಬಂಧ ವಿಶ್ವಸಂಸ್ಥೆ ನಿರ್ಣಯ ಅಂಗೀಕರಿಸಿದೆ. 
ಅಲ್ ಖೈದಾ ಉಗ್ರ ಸಂಘಟನೆಗೆ ಸಂಬಂಧಿಸಿದ ಶಸ್ತ್ರಸಜ್ಜಿತ ಜುಂಡ್ ಅಲ್ ಆಕ್ಸಾ ಹಾಗೂ ಇಸ್ಲಾಮಿಕ್ ಸ್ಟೇಟ್ ನ ಜಯಶ್ ಖಲೀದ್ ಇಬ್ನ್ ಅಲ್-ವಲೀದ್ ಉಗ್ರ ಸಂಘಟನೆಗಳಿಗೆ ಹಾಗೂ ಸಂಘಟನೆಗಳ ಉಗ್ರರಿಗೆ ವಿಶ್ವಸಂಸ್ಥೆ ನಿರ್ಬಂಧ ವಿಧಿಸಿದೆ. ಇನ್ನು ಸಿರಿಯಾದಲ್ಲಿರುವ ಎರಡು ಹಣ ವಿನಿಮಯ ಉದ್ಯಮಗಳ ಬಗ್ಗೆ ಈ ಎರಡು ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡಿದ್ದರ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಸಂಸ್ಥೆಗಳಿಗೂ ವಿಶ್ವಸಂಸ್ಥೆ ನಿರ್ಬಂಧ ವಿಧಿಸಿದೆ. 
ಭಯೋತ್ಪಾದನೆ ಮಾನವ ಕುಲಕ್ಕೇ ಮಾರಕವಾಗಿದೆ ಎಂದು ನಿರ್ಣಯ ಅಂಗೀಕರಿಸಿದ ವೇಳೆ ಚೀನಾದ ರಾಯಭಾರಿ ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವಿಶ್ವಸಂಸ್ಥೆಯಲ್ಲಿ ವ್ಯಕ್ತವಾಗಿದೆ. 
SCROLL FOR NEXT