ಮುಂಬೈ: ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ತೆಂಗಿನ ಮರ ಉರುಳಿ ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಶನಿವಾರ ಚೆಂಬೂರ್‌ನಲ್ಲಿ ನಡೆದಿದೆ.
ಮುಂಬೈ ನ ಚೆಂಬೂರ್‌ನ ಶುಶ್ರೂತ್ ಆಸ್ಪತ್ರೆಯ ಬಳಿ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಕಾಂಚನಾ ರಜತ್‌ನಾಥ್ ಎಂಬ ಮಹಿಳೆಯ ಮೇಲೆ ತೆಂಗಿನ
ಮರ ಉರುಳಿ ಬಿದಿದ್ದು, ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅಧಿಕ ರಕ್ತಸ್ರಾವವಾಗಿ ಮೃತಪಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಟಿವಿ ವಾಹಿನಿಯ ಮಾಜಿ ನಿರೂಪಕಿ ಕಾಂಚನಾ ಶುಕ್ರವಾರ ಮುಂಬೈನ ಚೆಂಬೂರ್‌ನಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಸಂಭವಿಸಿದ ದುರ್ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.