ಭಯೋತ್ಪಾದನೆ 
ದೇಶ

2016 ರಲ್ಲಿ ಭಾರತ ಸಿರಿಯಾಗಿಂತ ಹೆಚ್ಚು ಉಗ್ರ ದಾಳಿಗಳನ್ನು ಎದುರಿಸಿತ್ತು: ಅಮೆರಿಕ ವರದಿ

ಭಯೋತ್ಪಾದನೆ ನಡೆದಿರೌವುದು ಹಾಗೂ ಭಯೋತ್ಪಾದನೆ ವಿರುದ್ಧ ವಿವಿಧ ರಾಷ್ಟ್ರಗಳು ಕೈಗೊಂಡ ಕ್ರಮಗಳ ಬಗ್ಗೆ ಅಮೆರಿಕ ಸರ್ಕಾರಿ ಇಲಾಖೆಯೊಂದು ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ.

ನವದೆಹಲಿ: ಭಯೋತ್ಪಾದನೆ ನಡೆದಿರೌವುದು ಹಾಗೂ ಭಯೋತ್ಪಾದನೆ ವಿರುದ್ಧ ವಿವಿಧ ರಾಷ್ಟ್ರಗಳು ಕೈಗೊಂಡ ಕ್ರಮಗಳ ಬಗ್ಗೆ ಅಮೆರಿಕ ಸರ್ಕಾರಿ ಇಲಾಖೆಯೊಂದು ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ವಿಶೆಷವಾಗಿ ದಕ್ಷಿಣ ಏಷ್ಯಾ ಪ್ರದೇಶದ ಬಗ್ಗೆ ಹೆಚ್ಚಿನ ಗಮನ ಹರಿಸಿದೆ. 
2016 ರಲ್ಲಿ ಭಾರತ ಹೆಚ್ಚು ಭಯೋತ್ಪಾದಕ ದಾಳಿಗಳನ್ನು ಎದುರಿಸಿದೆ. ಕಳೆದ ವರ್ಷದಲ್ಲಿ ಭಯೋತ್ಪಾದಕ ದಾಳಿಯ ಆತಂಕ ಭಾರತದಲ್ಲಿ ಶೇ.16 ರಷ್ಟು ಹೆಚ್ಚಿದ್ದು ಅದರಿಂದ ಉಂಟಾಗಿರುವ ಸಾವಿನ ಸಂಖ್ಯೆ ಶೇ.17 ರಷ್ಟು ಹೆಚ್ಚಿದೆ ಎಂದು ಅಮೆರಿಕ ಇಲಾಖೆ ನೀಡಿರುವ ವರದಿಯಲ್ಲಿ ಹೇಳಲಾಗಿದೆ. 
ಅಮೆರಿಕ ಇಲಾಖೆಯ ವರದಿಯ ಪ್ರಕಾರ ಜಗತ್ತಿನಾದ್ಯಂತ 2016 ರಲ್ಲಿ ಭಯೋತ್ಪಾದಕ ದಾಳಿಗಳು ಶೇ.9 ರಷ್ಟು ಕಡಿಮೆಯಾಗಿದ್ದು, ಉಗ್ರದಾಳಿಯಿಂದ ಉಂಟಾಗಿರುವ ಸಾವಿನ ಸಂಖ್ಯೆ ಶೇ.13 ರಷ್ಟು ಕಡಿಮೆಯಾಗಿದೆ. ಆದರೆ ಭಾರತ ಮಾತ್ರ ಸಿರಿಯಾಗಿಂತ ಹೆಚ್ಚು ಭಯೋತ್ಪಾದಕ ದಾಳಿ ಎದುರಿಸಿದ್ದು, ಇರಾಕ್, ಅಫ್ಘಾನಿಸ್ತಾನದ ನಂತರ ಮೂರನೇ ಸ್ಥಾನದಲ್ಲಿದೆ ಎಂದು ವರದಿ ಮೂಲಕ ತಿಳಿದುಬಂದಿದೆ. 
ಭಯೋತ್ಪಾದಕ ದಾಳಿ ನಡೆಸಿರುವ ಸಂಘಟನೆಗಳ ಪೈಕಿ ನಕ್ಸಲ್ ಸಂಘಟನೆಗಳೂ ಇದ್ದು, ಬೋಕೋ ಹರಾಮ್ ಉಗ್ರ ಸಂಘಟನೆಗಿಂತ ಮೇಲೆ ಅಂದರೆ 3 ಸ್ಥಾನದಲ್ಲಿದ್ದು, ಟಾಪ್ 3 ಸಂಘಟನೆಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಹಾಗೂ ತಾಲೀಬಾನ್ ಉಗ್ರ ಸಂಘಟನೆಗಳಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್