ಉ.ಪ್ರ: ಉದ್ರಿಕ್ತ ಗುಂಪಿನಿಂದ ಕಲ್ಲು ತೂರಾಟ, 24 ಭದ್ರತಾ ಸಿಬ್ಬಂದಿ, ನಾಲ್ಕು ಐಟಿಬಿಪಿ, ಇಬ್ಬರು ಪೊಲೀಸರಿಗೆ ಗಾಯ
ಉತ್ತರ ಪ್ರದೇಶದ ಆಲಿಗಂಜ್ ಥಾಣಾ ಪ್ರದೇಶದ ಖಲ್ಲಮ್ ಗ್ರಾಮದಲ್ಲಿ ಶಿವ ದೇವರ ಭಕ್ತರ ಗುಂಪಿನ...
ಬರೇಲಿ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಆಲಿಗಂಜ್ ಥಾಣಾ ಪ್ರದೇಶದ ಖಲ್ಲಮ್ ಗ್ರಾಮದಲ್ಲಿ ಶಿವ ದೇವರ ಭಕ್ತರ ಗುಂಪಿನ ಮೇಲೆ ಸಮುದಾಯದ ಗುಂಪೊಂದು ಕಲ್ಲು ತೂರಾಟ ನಡೆಸಿದ್ದರಿಂದ 24 ಕವರಿಯಾಗಳು, ನಾಲ್ವರು ಇಂಡೊ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ ಮತ್ತು ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ಘಟನೆ ಸಂಬಂಧ 7 ಮಂದಿಯನ್ನು ಪೊಲೀಸರು ಬಂಧಿಸಿ ಗಲಭೆಯಲ್ಲಿ ಭಾಗಿಯಾದವರ ವಿರುದ್ಧ ಕೇಸು ದಾಖಲಿಸಿದ್ದಾರೆ. ಮೊನ್ನೆ ಶುಕ್ರವಾರ ರಾತ್ರಿ ಶಿವ ಭಕ್ತರ ಗುಂಪೊಂದು ಪೊಲೀಸರ ಭದ್ರತೆಯೊಂದಿಗೆ ಮೆರವಣಿಗೆ ಹೋಗುತ್ತಿದ್ದಾಗ ಕೆಲವು ಜನರು ಅವರ ಮೇಲೆ ಕಲ್ಲು ತೂರಾಟ ನಡೆಸಿದರು.
ಪೊಲೀಸ್ ಸೂಪರಿಂಟೆಂಡೆಂಟ್ ದೆಹತ್ ಸ್ವಾತಿ ಗಾರ್ಗ್ ಕೂಡಲೇ ಸ್ಥಳಕ್ಕೆ ಧಾವಿಸಿ ಗಲಭೆಕೋರರ ಮೇಲೆ ಲಾಠಿಚಾರ್ಚ್ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ಆದೇಶ ನೀಡಿದರು.
ಪರಿಸ್ಥಿತಿ ತಿಳಿಯಾದಾಗ ಸ್ಥಳದಲ್ಲಿ ಇಂಡೊ-ಟಿಬೆಟ್ ಗಡಿ ಭದ್ರತಾ ಪಡೆ ಪೊಲೀಸರನ್ನು ನಿಯೋಜಿಸಲಾಗಿದೆ.