ನವದೆಹಲಿ: ರಾಷ್ಟ್ರಪತಿ ಅವಧಿ ಪೂರೈಸಿ ನಿವೃತ್ತರಾದ ಬಳಿಕ ಪ್ರಣಬ್ ಮುಖರ್ಜಿ ಲುಟಿನ್ಸ್ ದೆಹಲಿಯ ಬಂಗಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ರಾಷ್ಟ್ರಪತಿ ಭವನದಿಂದ ಹೊರಬಂದ ನಂತರ ರಾಜಾಜಿ ಮಾರ್ಗ್ ನಲ್ಲಿರುವ ಬಂಗಲೆ ಪ್ರಣಬ್ ಮುಖರ್ಜಿ ಅವರ ಹೊಸ ವಾಸಸ್ಥಾನವಾಗಲಿದ್ದು, ಎರಡು ಅಂತಸ್ತಿನ ವಿಲ್ಲಾ 8 ರೂಂಗಳನ್ನು, ಗ್ರಂಥಾಲಯವನ್ನು ಹೊಂದಿದೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೂ ಸಹ ರಾಷ್ಟ್ರಪತಿ ಹುದ್ದೆಯ ಅವಧಿಯನ್ನು ಪೂರ್ಣಗೊಳಿಸಿ ನಿವೃತ್ತರಾದ ಬಳಿಕ, 2015 ರಲ್ಲಿ ನಿಧನರಾಗುವವರೆಗೂ ಇದೇ ಬಂಗಲೆಯಲ್ಲಿ ವಾಸವಿದ್ದರು.
ಅಬ್ದುಲ್ ಕಲಾಂ ನಂತರ ಬಿಜೆಪಿ ಸಂಸದ, ಕೇಂದ್ರ ಸಂಸ್ಕೃತಿ ಇಲಾಖೆ ಸಚಿವ ಮಹೇಶ್ ಶರ್ಮಾ ಈ ಬಂಗಲೆಯಲ್ಲಿದ್ದರು, ಈಗ ಅವರು 10 ಅಕ್ಬರ್ ರಸ್ತೆಯಲ್ಲಿರುವ ಬಂಗಲೆಗೆ ವಾಸ್ತವ್ಯವನ್ನು ಸ್ಥಳಾಂತರಗೊಳಿಸಿದ್ದಾರೆ.