ಯಮಹಾ ಫ್ಯಾಸ್ಸಿನೊ ಮಿಸ್ ದೀವಾ – ಮಿಸ್ ಯೂನಿವರ್ಸ್ ಇಂಡಿಯಾ 2017 ಯಮಹಾ ಫ್ಯಾಸ್ಸಿನೊ, ಮಿಸ್ ದೀವಾದ ಗ್ಲಾಮರ್ ಮತ್ತು ಉತ್ಸಾಹದ ಅಂಶವನ್ನು – ತನ್ನ ಎಲ್ಲಾ ಹೊಸ ಋತುಮಾನದ ಪ್ರಾರಂಭದೊಂದಿಗೆ ಇದೀಗ ತಾನೆ ಮಿಸ್ ಯೂನಿವರ್ಸ್ ಇಂಡಿಯಾ 2017 ತನ್ನ ಉದ್ದೇಶವನ್ನು ಉತ್ತಮಗೊಳಿಸಿದೆ. ಇದರ ವಿಜೇತರು ಬೆಡಗಿನ ಪ್ರದರ್ಶನವನ್ನು ಬಯಸುವಂತಹ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುವರು. ಸೊಬಗು, ಸಮತೋಲನ ಮತ್ತು ಸೌಂದರ್ಯದ ವ್ಯಾಖ್ಯಾನವನ್ನು ಕ್ರಾಂತಿಗೊಳಿಸುವ ಒಬ್ಬ ಹುಡುಗಿಯನ್ನು ಹುಡುಕುವ ಸರಣಿಯಲ್ಲಿ ಲಾರಾ ದತ್ತಾ ರವರು ಇದರ ಮಾರ್ಗದರ್ಶಿಯಾಗಿದ್ದಾರೆ ಮತ್ತು ಈ ಸರಣಿಯ ಪ್ರಮುಖ ವ್ಯಕ್ತಿಯಾಗಿ ಮ್ಯಾಂಟಲ್ ಅನ್ನು ವಹಿಸಿಕೊಳ್ಳಲಿದ್ದಾರೆ.
ಸಮಿತಿಯ ಸದಸ್ಯರು ಮತ್ತು ತೀರ್ಪುಗಾರರೊಂದಿಗೆ ಗಣ್ಯ ಫ್ಯಾಷನ್ ಸಹಿತವಾದ ಲಾರಾ ದತ್ತಾರವರು ಅಂತಿಮ ಫೈನಲಿಸ್ಟ್ ಗಳನ್ನು ವಿವಿಧ ಟಾಸ್ಕ್ ಗಳಲ್ಲಿ ದೇಶದಾದ್ಯಂತ ಐತಿಹಾಸಿಕ ದಾಖಲೆ ನಿರೂಪಿಸುವರು ಮತ್ತು ನಿರ್ಣಯಿಸುವರು. ರಾಂಪ್ ವಾಕ್, ಫೋಟೋ ಶೂಟ್, ಪರ್ಫೆಕ್ಟ್ ಬಾಡಿ, ಕಮ್ಯೂನಿಕೇಶನ್ ಸ್ಕಿಲ್ ಮತ್ತು ಇನ್ನೂ ಹೆಚ್ಚಿನ ವಿವಿಧ ಮಾನದಂಡಗಳ ಮೇಲೆ ಥೀಮ್‌ಗಳನ್ನು ವಿನ್ಯಾಸಗೊಳಿಸಲಾಗುವುದು ಮತ್ತು ತೀರ್ಮಾನಿಸಲಾಗುವುದು.
ದೇಶದಾದ್ಯಂತ ಆಡಿಷನ್‌ಗಳು ಆಗಸ್ಟ್ 5, 2017 ರಿಂದ ಪ್ರಾರಂಭವಾಗುತ್ತವೆ, ಅದರೊಂದಿಗೆ ಮಿಸ್ ಯೂನಿವರ್ಸ್ ಟಿಕೆಟ್ ಪಡೆಯುವಂತಹ ಜೀವಮಾನದ ಏಕೈಕ ಅವಕಾಶವನ್ನು ವಿಜೇತರಿಗೆ ನೀಡಲಾಗುವುದು. ಲಕ್ನೋ, ಕೊಲ್ಕತ್ತಾ, ಇಂದೋರ್, ಹೈದರಾಬಾದ್, ಪುಣೆ, ಅಹ್ಮದಾಬಾದ್, ಬೆಂಗಳೂರು, ಚಂಡೀಘಢ ಮತ್ತು ದೆಹಲಿ ನಗರಗಳಿಂದ ಅತ್ಯುತ್ತಮರಾದವರನ್ನು ಕರೆತರುವಂತಹ ಈ ಆಡಿಷನ್‌ಗಳು ದೇಶದ ಉದ್ದಗಲಕ್ಕೂ ಪಯಣಿಸುತ್ತವೆ, ಬೆಂಗಳೂರಿನಲ್ಲಿ ಆಡಿಶನ್ ಆಗಸ್ಟ್ 20ರಂದು ಭಾನುವಾರ ನಡೆಯಲಿದೆ. ಆ ಮೂಲಕ ಆಡಿಷನ್‌ಗಳ ಅಂತಿಮ ಹಂತದ ಪರೀಕ್ಷೆಯು ಮುಂಬೈನಲ್ಲಿ ಅಂತ್ಯಗೊಳ್ಳಲಿದೆ.
ಮಿಸ್ ದೀವಾ ಆಡಿಷನ್ ವೇಳಾಪಟ್ಟಿ
ತಿಂಗಳು ದಿನಾಂಕ ದಿನ ನಗರ
ಆಗಸ್ಟ್ 5 ಶನಿವಾರ ಲಕ್ನೋ
ಆಗಸ್ಟ್ 6 ಭಾನುವಾರ ಕೊಲ್ಕತ್ತಾ
ಆಗಸ್ಟ್ 11 ಶುಕ್ರವಾರ ಇಂದೋರ್
ಆಗಸ್ಟ್ 12 ಶನಿವಾರ ಹೈದರಾಬಾದ್
ಆಗಸ್ಟ್ 13 ಭಾನುವಾರ ಪುಣೆ
ಆಗಸ್ಟ್ 19 ಶನಿವಾರ ಅಹಮದಾಬಾದ್
ಆಗಸ್ಟ್ 20 ಭಾನುವಾರ ಬೆಂಗಳೂರು
ಆಗಸ್ಟ್ 26 ಶನಿವಾರ ಚಂಡೀಗಢ
ಆಗಸ್ಟ್ 27 ಭಾನುವಾರ ದೆಹಲಿ
ಸೆಪ್ಟೆಂಬರ್ 7 ಶನಿವಾರ ಮುಂಬೈ