ಪಾಟ್ನ: ನಿತೀಶ್ ಕುಮಾರ್ ವಿರುದ್ಧ ಕೊಲೆ ಆರೋಪವಿದ್ದು, ಗಲ್ಲು ಶಿಕ್ಷೆಯೂ ಆಗಬಹುದು ಎಂದಿದ್ದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ವಿರುದ್ಧ ಜೆಡಿಯು ಆಕ್ರೋಶ ವ್ಯಕ್ತಪಡಿಸಿದ್ದು, ಲಾಲು ಪ್ರಸಾದ್ ಅವರನ್ನು ಕಟಕಟೆಯಲ್ಲಿ ನಿಲ್ಲಿಸಲು ಪ್ರತಿಜ್ಞೆ ಮಾಡಿದೆ.
ಆರ್ ಜೆಡಿಯೊಂದಿಗಿನ ಮೈತ್ರಿ ತೊರೆದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್ ಕುಮಾರ್ ವಿರುದ್ಧ ಅಸಮಾಧಾನಗೊಂಡಿದ್ದ ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್ ವಿರುದ್ಧವೂ ಗಂಭೀರ ಆರೋಪಗಳಿವೆ, ಗಲ್ಲು ಶಿಕ್ಷೆಯೂ ಆಗಬಹುದು ಎಂದು ಹೇಳಿದ್ದರು. ನಿತೀಶ್ ವಿರುದ್ಧ ಮಾನನಷ್ಟಕಾರಿ ಹೇಳಿಕೆ ನೀಡಿದ್ದ ಲಾಲು ಪ್ರಸಾದ್ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಜೆಡಿಯು ಸಜ್ಜುಗೊಂಡಿದೆ.
ನಿತೀಶ್ ಕುಮಾರ್ ಅವರ ಬಗ್ಗೆ ಯಾರೂ ಸಹ ಇಂತಹ ಆರೋಪ ಮಾಡಲು ಸಾಧ್ಯವಿಲ್ಲ. ಲಾಲು ಪ್ರಸಾದ್ ನಿತೀಶ್ ಕುಮಾರ್ ಅವರ ವಿರುದ್ಧ ನೀಡಿರುವ ಹೇಳಿಕೆಯ ವಿರುದ್ಧ ಕೋರ್ಟ್ ಗೆ ಹೋಗುತ್ತೇವೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.