ದೇಶ

ಕುಲಭೂಷಣ್ ಜಾಧವ್ ತಾಯಿಗೆ ವೀಸಾ ನೀಡಿಕೆ ಬಗ್ಗೆ ಅಧಿಕೃತ ಮಾಹಿತಿಯಿಲ್ಲ: ಭಾರತ

Shilpa D
ನವದೆಹಲಿ: ಕುಲಭೂಷಣ್ ಜಾಧವ್ ತಾಯಿ ಅವರಿಗೆ ಪಾಕಿಸ್ತಾನ ವೀಸಾ ಒದಗಿಸಿರುವ ಸಂಬಂಧ ಭಾರತಕ್ಕೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.
ಕುಲಭೂಷಣ್ ತಾಯಿಗ ಆವಂತಿಕಾ ಅವರಿಗೆ ವೀಸಾ ನೀಡುವಂತೆ ಕೋರಿ ಬರೆದಿದ್ದ ಪತ್ರಕ್ಕೆ ಪಾಕಿಸ್ತಾನ ವಿದೇಶಾಂಗ ಇಲಾಖೆಯಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ಗೋಪಾಲ್ ಬಗ್ಲೆ ಹೇಳಿದ್ದಾರೆ.
ಜಾಧವ್ ತಾಯಿಗೆ ವೀಸಾ ನೀಡುವ ಸಂಬಂಧ ಉಂಟಾಗಿರುವ ಯಾವುದೇ  ಬದಲಾವಣೆಗಳ ಬಗ್ಗೆ ಇದುವರೆಗೂ ನಮಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ,ಮಗನನ್ನು ಭೇಟಿ ಮಾಡಲು ಆವಂತಿಕಾ ಅವರಿಗೆ ವೀಸಾ ನೀಡುವ ಸಂಬಂಧ ಪಾಕಿಸ್ತಾನದ ಜೊತೆ ಔಪಚಾರಿಕ ಮಾತುಕತೆ ನಡೆದಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.
ಮೇ 18 ರಂದು ಪಾಕಿಸ್ತಾನ ಮಿಲಿಟರಿ ಕೋರ್ಟ್ ಕುಲಭೂಷಣ್ ಜಾಧವ್ ಅವರಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ಪ್ರಶ್ನಿಸಿತ್ತು. ಬಲೋಚಿಸ್ತಾನದಲ್ಲಿ ಮಾರ್ಚ್ 3, 2016 ರಂದು ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಘೋಷಿಸಿತ್ತು. 
SCROLL FOR NEXT