ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನ 44 ಶಾಸಕರು 
ದೇಶ

ಆಪರೇಷನ್ ಕಮಲ ಭೀತಿ: ಗುಜರಾತ್ ನಿಂದ ಕಾಂಗ್ರೆಸ್ 44 ಶಾಸಕರು ಬೆಂಗಳೂರಿಗೆ ಶಿಫ್ಟ್

ಮತ್ತಷ್ಟು ಶಾಸಕರು ಆಪರೇಷನ್ ಕಮಲಕ್ಕೊಳಗಾಗುವರೆಂಬ ಭೀತಿಯಲ್ಲಿ ಗುಜರಾತ್ ನ 44 ಕೈ ಶಾಸಕರನ್ನು ಬೆಂಗಳೂರಿಗೆ ...

ಅಹಮದಾಬಾದ್: ಕೇವಲ 24 ಗಂಟೆಗಳಲ್ಲಿ ಗುಜರಾತ್ ನ ಆರು ಕಾಂಗ್ರೆಸ್ ಶಾಸಕರು ರಾಜಿನಾಮೆ ನೀಡಿದ್ದಾರೆ. ಈ  ಹಿನ್ನೆಲೆಯಲ್ಲಿ ಮತ್ತಷ್ಟು ಶಾಸಕರು ಆಪರೇಷನ್ ಕಮಲಕ್ಕೊಳಗಾಗುವರೆಂಬ ಭೀತಿಯಲ್ಲಿ ಗುಜರಾತ್ ನ 44 ಕೈ ಶಾಸಕರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಅಹ್ಮದ್‌ ಪಟೇಲ್‌ ಅವರನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ರೆಸಾರ್ಟ್‌ ರಾಜಕಾರಣಕ್ಕೆ ಮುಂದಾಗಿದೆ.
ಕಾಂಗ್ರೆಸ್ ನ 51 ರಲ್ಲಿ 44 ಶಾಸಕರು, ರಾತ್ರಿ 11.45ರ ವೇಳೆಗೆ  ಅಹಮದಾಬಾದ್-ಬೆಂಗಳೂರು ಇಂಡಿಗೋ ಫ್ಲೈಟ್ ನಲ್ಲಿ ಬೆಂಗಳೂರು ತಲುಪಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕಕ್ಕೆ ದಕ್ಷಿಣ ಗುಜರಾತ್ ಮತ್ತು ಸೌರಷ್ಟ್ರದಿಂದ ಕೆಲ ಶಾಸಕರು ಮುಂಬಯಿ ಮಾರ್ಗವಾಗಿ ಬೆಂಗಳೂರು ತಲುಪಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಿಂದ 15 ನಿಮಿಷ ಪ್ರಯಾಣದ ಕ್ಲಾರ್ಕ್ಸ್ ಎಕ್ಸೋಟಿಕಾ ರೆಸಾರ್ಟ್ ನಲ್ಲಿ ಶಾಸಕರು ಬೀಡು ಬಿಟ್ಟಿದ್ದಾರೆ.
ಗೋವಾ, ಮಣಿಪುರ ಮತ್ತು ಬಿಹಾರದಲ್ಲಿ ತಮ್ಮ ಹಣ ಹಾಗೂ ಶಕ್ತಿಯನ್ನು ಉಪಯೋಗಿಸಿ ಶಾಸಕರರನ್ನು ಖರೀದಿಸಿದಂತೆ ಗುಜರಾತ್ ನಲ್ಲೂ ನಮ್ಮ ಶಾಸಕರಿಗೆ ಬಿಜೆಪಿ ಹಣದ ಆಮೀಷ ತೋರುತ್ತಿದೆ ಎಂದು ಗುಜರಾತ್ ಕಾಂಗ್ರೆಸ್ ಆರೋಪಿಸಿದೆ.
ನಕಲಿ ಎನ್ ಕೌಂಟರ್ ಆರೋಪದಲ್ಲಿ 8-9 ವರ್ಷ ಜೈಲಿನಲ್ಲಿದ್ದ ಐಪಿಎಸ್ ಅಧಿಕಾರಿ ನಮ್ಮ ಶಾಸಕರನ್ನು ಕಿಡ್ನಾಪ್ ಮಾಡುವ ಸಾಧ್ಯತೆಯಿದೆ. ಹಣದ ಆಸೆ ಇಲ್ಲವೇ ಬೆದರಿಸಿ ಶಾಸಕರನ್ನು ಪಕ್ಷಕ್ಕೆ ಸೆಳೆದುಕೊಳ್ಳುವ ಸಾಧ್ಯತೆಯಿದೆ. ನಮಗೆ ಅಲ್ಲಿ ರಕ್ಷಣೆಯಿಲ್ಲ, ಹೀಗಾಗಿ ನಮಗೆ ಸುರಕ್ಷತೆಯಿರುವ ಸ್ಥಳಕ್ಕೆ ನಾವು ಬಂದಿದ್ದೇವೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅರ್ಜುನ್ ಮೋದನವೀಯ ಹೇಳಿದ್ದಾರೆ.
ಗುಜರಾತ್‌ ವಿಧಾನಸಭೆಯಿಂದ ರಾಜ್ಯಸಭೆಯ ಮೂರು ಸ್ಥಾನಗಳಿಗೆ ಆಗಸ್ಟ್‌ 8ರಂದು ಮತದಾನ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ  ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್  ಅವರು ಕಣದಲ್ಲಿದ್ದಾರೆ.
ಅಹ್ಮದ್‌ ಪಟೇಲ್‌ ಅವರನ್ನು ಸೋಲಿಸಲೇಬೇಕು ಎಂದು ಹಟ ತೊಟ್ಟಿರುವ ಅಮಿತ್‌ ಷಾ, ಕಾಂಗ್ರೆಸ್‌ ಶಾಸಕರ ರಾಜೀನಾಮೆ ಕೊಡಿಸಿ, ಆ ಪಕ್ಷದ ಬಲ ಕುಗ್ಗಿಸಲು ತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದರಿಂದಾಗಿ ಗುಜರಾತ್‌ ವಿಧಾನಸಭೆಯ  57 ಕಾಂಗ್ರೆಸ್ ಶಾಸಕರ ಪೈಕಿ ಆರು ಮಂದಿ ಈಗಾಗಲೇ ರಾಜೀನಾಮೆ ಕೊಟ್ಟಿದ್ದು, ಶಂಕರ ಸಿಂಹ ವಾಘೆಲಾ ಪಕ್ಷದಿಂದ ಹೊರ ನಡೆದಿದ್ದಾರೆ. ಇನ್ನಷ್ಟು ಶಾಸಕರು ರಾಜೀನಾಮೆ ಕೊಟ್ಟು ಪಟೇಲ್‌ಗೆ  ಕೈಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಹ್ಮದ್ ಪಟೇಲ್ ರನ್ನು ಗೆಲ್ಲಿಸಬೇಕೆಂಬ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಕರ್ನಾಟಕಕ್ಕೆ ಕರೆತರಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ

T20 ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಅಪರೂಪದ ವಿಶ್ವ ದಾಖಲೆ ಬರೆದ ಪಾಕ್ ಕ್ಯಾಪ್ಟನ್!

ಆಯ್ಕೆ ಸಮಿತಿ ಅಧ್ಯಕ್ಷರ ಆಯ್ಕೆ ಕಸರತ್ತು; BCCI ಆಫರ್ ತಿರಸ್ಕರಿಸಿದ ಸ್ಟಾರ್‌ ಗಳು, 100 ಟೆಸ್ಟ್‌ ಅನುಭವಿ ಆಟಗಾರರಿಂದಲೇ ನಕಾರ?