ದೇಶ

2018ರ ವರೆಗೂ ಒಂದು ಕೆಜಿ ಗೋಧಿ 2 ರು., ಕೆಜಿ ಅಕ್ಕಿ 3 ರು. ರಂತೆ ವಿತರಣೆ: ಕೇಂದ್ರ

Lingaraj Badiger
ನವದೆಹಲಿ: ದೇಶದ 81 ಕೋಟಿ ಜನರಿಗೆ ಈಗ 2 ರುಪಾಯಿಗೆ ಕೆಜೆ ಗೋಧಿ ಹಾಗೂ 3 ರುಪಾಯಿಗೆ ಕೆಜಿ ಅಕ್ಕಿ ನೀಡಲಾಗುತ್ತಿದ್ದು, ಅದನ್ನು 2018ರ ವರೆಗೂ ಪರಿಷ್ಕರಿಸುವುದಿಲ್ಲ ಎಂದು ಮಂಗಳವಾರ ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಹಾರ ಧಾನ್ಯಗಳ ಬೆಲೆ ಪರಿಷ್ಕರಿಸಲು ಅವಕಾಶ ಇದೆ. ಆದರೆ ಈಗಿರುವ ಯೋಜನೆಯನ್ನು 2018ರ ವರೆಗೂ ಮುಂದುವರೆಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಇಂದು ಲೋಕಸಭೆಗೆ ತಿಳಿಸಿದ್ದಾರೆ.
ಈ ಯೋಜನೆಯಡಿ 3 ರುಪಾಯಿಗೆ ಕೆಜಿ ಅಕ್ಕಿ, 2 ರುಪಾಯಿಗೆ ಕೆಜೆ ಗೋಧಿ ಹಾಗೂ 1 ರುಪಾಯಿಗೆ ಒರಟಾದ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಆಹಾರ ಭದ್ರತಾ ಕಾಯ್ದೆಯನ್ನು ಕೇಂದ್ರ ಸರ್ಕಾರ ಸಮರ್ಪಕವಾಗಿ ಜಾರಿಗೆ ತರುತ್ತಿದ್ದು, ಯಾರೊಬ್ಬರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರಗಳ ಜಾವಾಬ್ದಾರಿ ಎಂದು ಪಾಸ್ವಾನ್ ಅವರು ತಿಳಿಸಿದ್ದಾರೆ.
SCROLL FOR NEXT