ಪಾಟ್ನಾ: ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಿದ ಬಿಹಾರದ 15 ವರ್ಷದ ಯುವಕನನ್ನು ಬಂಧಿಸಲಾಗಿದೆ.
ಫೇಸ್ ಬುಕ್ ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷ ವಾಕ್ಯವನ್ನು ಹಾಕಿದ್ದರ ವಿರುದ್ಧ ಬಂದಿದ್ದ ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಫ್ಸರ್ ಖಾನ್ ಎಂಬ ಯುವಕನನ್ನು ಬಂಧಿಸಿದ್ದಾರೆ. ಕಿಶನ್ ಗಂಜ್ ನ ಹೆಚ್ಚುವರಿ ಎಸ್ ಪಿ ರಾಜೀವ್ ಮಿಶ್ರಾ, ಫೇಸ್ ಬುಕ್ ಪೋಸ್ಟ್ ನ್ನು ನೋಡಿದ ಕೆಲವರು ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು ಎಂದು ತಿಳಿಸಿದ್ದಾರೆ.
ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಯುವಕನನ್ನು ಬಂಧಿಸಬೇಕೆಂಬ ಒತ್ತಡ ಬಂದಿದ್ದು, ಪಾಕಿಸ್ತಾನದ ಪರ ಘೋಷ ವಾಕ್ಯ ಹಾಕಿದ್ದ ಯುವಕನನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಎಸ್ ಪಿ ಹೇಳಿದ್ದಾರೆ.