ದೇಶ

ಭಯೋತ್ಪಾದಕ ಸ್ನೇಹಿ ರಾಷ್ಟ್ರಗಳ ಪಟ್ಟಿಯಿಂದ ಕಳಚಿಕೊಳ್ಳಲು ಹೆಣಗುತ್ತಿರುವ ಪಾಕಿಸ್ತಾನ!

Srinivas Rao BV
ಇಸ್ಲಾಮಾಬಾದ್: ಭಯೋತ್ಪಾದಕರಿಗೆ ಆರ್ಥಿಕ ನೆರವು ದೊರೆಯುತ್ತಿರುವುದನ್ನು ಪತ್ತೆ ಮಾಡುವ ಅಂತಾರಾಷ್ಟ್ರೀಯ ಸಂಸ್ಥೆ ಜೂನ್ ನಲ್ಲಿ ಸಭೆ ಸೇರಲಿದ್ದು, ಇದಕ್ಕೂ ಮುನ್ನ ಪಾಕಿಸ್ತಾನ 5,000 ಭಯೋತ್ಪಾದಕರ ಬ್ಯಾಂಕ್ ಖಾತೆಗಳಿಗೆ ಕತ್ತರಿ ಹಾಕಿದೆ. 
5000 ಭಯೋತ್ಪಾದಕರ ಖಾತೆಗೆ ಕತ್ತರಿ ಹಾಕುವ ಮೂಲಕ ಭಯೋತ್ಪಾದಕರಿಗೆ ಸಿಗಬೇಕಿದ್ದ ಸುಮಾರು 3 ಮಿಲಿಯನ್ ಡಾಲರ್ ನಷ್ಟು ಹಣವನ್ನು ಪಾಕಿಸ್ತಾನ ಸಧ್ಯಕ್ಕೆ ತಡೆ ಹಿಡಿದಿದೆ. ಎಕ್ಸ್ ಪ್ರೆಸ್ ಟ್ರಿಬ್ಯೂ ಪ್ರಕಟಿಸಿರುವ ವರದಿಯ ಪ್ರಕಾರ ಫೈನಾನ್ಸಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಅಥವಾ ಹಣಕಾಸು ಕ್ರಿಯೆ ಕಾರ್ಯಪಡೆ ಸ್ಪೆನ್ ನಲ್ಲಿ ಮುಂದಿನ ತಿಂಗಳು ಸಭೆ ಸೇರಲಿದ್ದು ಭಯೋತ್ಪಾದಕರಿಗೆ ಸಿಗುತ್ತಿರುವ ಆರ್ಥಿಕ ನೆರವಿನ ಬಗ್ಗೆ ಚರ್ಚಿಸಲಿದೆ. 
ಭಯೋತ್ಪಾದಕರಿಗೆ ಸಿಗುತ್ತಿರುವ ಆರ್ಥಿಕ ನೆರವಿಗೆ ಕಡಿವಾನ ಹಾಕುವುದಕ್ಕಾಗಿ 1989 ರಲ್ಲಿ 35 ರಾಷ್ಟ್ರಗಳ ಈ ಅಂತರಸರ್ಕಾರಿ ಸಂಸ್ಥೆಯನ್ನು ಪ್ರಾರಂಭಿಸಲಾಗಿತ್ತು. ಭಯೋತ್ಪಾದಕರಿಗೆ ನೆರವು ನೀಡುವ ರಾಷ್ಟ್ರಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತಾತ್ಕಾಲಿಕವಾಗಿ ಭಯೋತ್ಪಾದಕ ಸ್ನೇಹಿ ರಾಷ್ಟ್ರಗಳ ಪಟ್ಟಿಯಿಂದ ಕಳಚಿಕೊಳ್ಳಲು ಯತ್ನಿಸುತ್ತಿದ್ದು  5,000 ಭಯೋತ್ಪಾದಕರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ. 
SCROLL FOR NEXT