ದೇಶ

ಪಂಜಾಬ್ ನಲ್ಲಿ ಪಾಕ್ ಐಎಸ್ಐ ಜತೆ ನಂಟು ಹೊಂದಿದ್ದ ಮೂವರು ಉಗ್ರರ ಬಂಧನ

Lingaraj Badiger
ಚಂಡೀಗಢ: ಪಂಜಾಬ್ ಪೊಲೀಸರು ಭಾನುವಾರ ಪಾಕಿಸ್ತಾನದ ಐಎಸ್ಐ ಬೆಂಬಲಿತ ಉಗ್ರ ಸಂಘಟನೆ ಇಂಟರ್ ನ್ಯಾಷನಲ್ ಸಿಖ್ ಯ್ಯೂತ್ ಫೆಡರೇಷನ್(ಐಎಸ್ ವೈಎಫ್)ಗೆ ಸೇರಿದ ಮೂವರು ಉಗ್ರರನ್ನು ಬಂಧಿಸಿದ್ದಾರೆ.
ಬಂಧಿತ ಉಗ್ರರನ್ನು ಗುರ್ದುಯಾಲ್ ಸಿಂಗ್, ಜಾಗ್ರೂಪ್ ಸಿಂಗ್ ಮತ್ತು ಸತ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಮೂವರು ಉಗ್ರರು ಐಎಸ್ಐನಿಂದ ತರಬೇತಿ ಪಡೆದಿದ್ದು, ದೇಶದ ವಿವಿಧ ಕಡೆ ದಾಳಿ ಸಂಚು ರೂಪಿಸಿದ್ದರು ಎನ್ನಲಾಗಿದೆ.
ಕಳೆದ ಮೇ 21ರಂದು ಅಮೃತಸರದ ಅಂತರಾಷ್ಟ್ರೀಯ ಗಡಿಯಲ್ಲಿ ಬಿಎಸ್ಎಫ್ ಯೋಧರು ಜಪ್ತಿ ಮಾಡಿದ್ದ ಶಸ್ತ್ರಾಸ್ತ್ರಗಳನ್ನು ಈ ಐಎಸ್ ವೈಎಫ್ ಉಗ್ರರು ಸರಬರಾಜು ಮಾಡಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.
ಮೇ 21ರಂದು ಐಎಸ್ ವೈಎಫ್ ಸೇರಿದ ಇಬ್ಬರು ಉಗ್ರರಾದ ಮಾನ್ ಸಿಂಗ್ ಮತ್ತು ಶೇರ್ ಸಿಂಗ್ ಅವರನ್ನು ಬಂಧಿಸಿದ್ದ ಬಿಎಸ್ ಎಫ್ ಪೊಲೀಸರು ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿದ್ದರು.
SCROLL FOR NEXT