ರಾಹುಲ್ ಗಾಂಧಿ 
ದೇಶ

ಆರ್ ಎಸ್ಎಸ್ ನ್ನು ಎದುರಿಸಲು ಉಪನಿಷದ್, ಗೀತೆಯನ್ನು ಓದುತ್ತಿದ್ದೇನೆ: ರಾಹುಲ್ ಗಾಂಧಿ

ಆರ್ ಎಸ್ಎಸ್ ಸಿದ್ಧಾಂತಗಳನ್ನು ವಿರೋಧಿಸಿ ಪ್ರತಿಭಟಿಸಲು ಭಗವದ್ಗೀತೆ ಹಾಗೂ ಉಪನಿಷದ್ ಗಳನ್ನು ಓದುತ್ತಿದ್ದೇನೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಚೆನ್ನೈ: ಆರ್ ಎಸ್ಎಸ್ ನ್ನು ಎದುರಿಸಲು ಭಗವದ್ಗೀತೆ ಹಾಗೂ ಉಪನಿಷದ್ ಗಳನ್ನು ಓದುತ್ತಿದ್ದೇನೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. 
ಬಿಜೆಪಿ, ಆರ್ ಎಸ್ಎಸ್ ನ ವಿರುದ್ಧ ಹೋರಾಡುತ್ತಿದ್ದೇನೆ ಆದ್ದರಿಂದ ಇತ್ತೀಚಿನ ದಿನಗಳಲ್ಲಿ ನಾನು ಭಗವದ್ಗೀತೆ ಹಾಗೂ ಉಪನಿಷತ್ ಗಳನ್ನು ಹೆಚ್ಚು ಅಧ್ಯಯನ ಮಾಡುತ್ತಿದ್ದೇನೆ ಎಂದು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ರಾಹುಲ್ ಗಾಂಧಿ ಹೇಳಿದ್ದಾರೆ. 
ನೀವು (ಆರ್ ಎಸ್ಎಸ್) ನವರು ಜನರನ್ನು ಹತ್ತಿಕ್ಕುತ್ತಿದ್ದೀರಿ ( ಒಡೆಯುತ್ತಿದ್ದೀರಿ) ಆದರೆ ಉಪನಿಷದ್ ಗಳಲ್ಲಿ ಎಲ್ಲರೂ ಒಂದೇ ಎಂಬ ಸಂದೇಶವಿದೆ. ನಿಮ್ಮ ಧರ್ಮ ಹೇಳಿರುವುದಕ್ಕೆ ತದ್ವಿರುದ್ಧವಾಗಿ ನೀವು ಹೇಗೆ ನಡೆಯಲು ಸಾಧ್ಯ ಎಂದು ಆರ್ ಎಸ್ಎಸ್ ನ್ನು ಪ್ರಶ್ನಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿರುವುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. 
ಬಿಜೆಪಿ ಭಾರತದ ಮೂಲತತ್ವವನ್ನು ಅರಿತುಕೊಂಡಿಲ್ಲ, ಕೇವಲ ನಾಗ್ಪುರವನ್ನು ಮಾತ್ರ ಅರಿತುಕೊಂಡಿದೆ ಎಂದು ರಾಹುಲ್ ಗಾಂಧಿ ಇದೇ ಕಾರ್ಯಕ್ರಮದಲ್ಲಿ ವ್ಯಂಗ್ಯವಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video