ಸಂಗ್ರಹ ಚಿತ್ರ 
ದೇಶ

ಇಸ್ರೋ ಐತಿಹಾಸಿಕ ಸಾಧನೆ: ಪ್ರಧಾನಿ ಮೋದಿ, ರಾಷ್ಟ್ರಪತಿ ಫ್ರಣಬ್ ಮುಖರ್ಜಿ ಶುಭಾಶಯ!

ಜಿಎಸ್ ಎಲ್ ವಿ ಮಾರ್ಕ್ 3 ಬೃಹತ್ ಉಡಾವಣಾ ನೌಕೆಯ ಮೂಲಕ ಜಿಸ್ಯಾಟ್ 19 ಬೃಹತ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶುಭಾಶಯ ತಿಳಿಸಿದ್ದಾರೆ.

ನವದೆಹಲಿ: ಜಿಎಸ್ ಎಲ್ ವಿ ಮಾರ್ಕ್ 3 ಬೃಹತ್ ಉಡಾವಣಾ ನೌಕೆಯ ಮೂಲಕ ಜಿಸ್ಯಾಟ್ 19 ಬೃಹತ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ  ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶುಭಾಶಯ ತಿಳಿಸಿದ್ದಾರೆ.

ಟ್ವಿಟರ್ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾರಿರುವ ಪ್ರಧಾನಿ ನರೇಂದ್ರ ಮೋದಿ, ಇಸ್ರೋ ವಿಜ್ಞಾನಿಗಳ ಸಾಧನೆಯಿಂದಾಗಿ ಇಡೀ ದೇಶವೇ ಹೆಮ್ಮೆ ಪಡುವಂತಾಗಿದೆ. ಜಿಎಸ್ ಎಲ್ ವಿ ಮಾರ್ಕ್ 3 ಯಶಸ್ವಿ ಉಡಾವಣೆ  ಮೂಲಕ ಮುಂದಿನ ಹಂತದ ಉಪಗ್ರಹ ಉಡಾವಣೆಗೆ ಭಾರತ ತನ್ನನ್ನು ತಾನು ತೊಡಗಿಸಿಕೊಳ್ಳುವಂತಾಗಿದೆ. ಇಸ್ರೋ ವಿಜ್ಞಾನಿಗಳ ಸಾಧನೆ ವಿಶ್ವ ಸಮುದಾಯದ ಎದುರು ಭಾರತ ಹೆಮ್ಮೆ ಪಡುವಂತಾಗಿದೆ ಎಂದು ಟ್ವೀಟ್  ಮಾಡಿದ್ದಾರೆ.

ಅಂತೆಯೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೂ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಮೆಚ್ಚಿ ಟ್ವೀಟ್ ಮಾಡಿದ್ದು, ಇಸ್ರೋ ವಿಜ್ಞಾನಿಗಳ ಸಾಧನೆಗೆ ಹೃದಯ ಪೂರ್ವಕ ಶುಭಾಶಯ ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲೇ ಇಂದು ಮಹತ್ವದ ದಿನವಾಗಿದ್ದು, ಬೃಹತ್ ಪ್ರಮಾಣದ ಸ್ಯಾಟೆಲೈಟ್ ಗಳನ್ನು ಉಡಾವಣೆ ಮಾಡಬಲ್ಲ ಮತ್ತು ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ನೆರವಾಗಬಲ್ಲ ಬೃಹತ್ ರಾಕೆಟ್  ಜಿಎಸ್ ಎಲ್ ವಿ ಮಾರ್ಕ್ 3 ಡಿ1 ನೌಕೆಯನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಂದು ನಭಕ್ಕೆ ಚಿಮ್ಮಿದ ಜಿಎಸ್ ಎಲ್ ವಿ ಮಾರ್ಕ್ 3 ನೌಕೆ ತನ್ನೊಂದಿಗೆ ಬೃಹತ್ ಜಿಸ್ಯಾಟ್ 19 ಉಪಗ್ರಹವನ್ನು ಹೊತ್ತೊಯ್ದು ನಿಗದಿತ  ಸಮಯದಲ್ಲಿ ನಿಗದಿತ ಕಕ್ಷೆಯನ್ನು ಸೇರಿಸಿದೆ. ಜಿಸ್ಯಾಟ್ 19 ಭಾರತದ ಅತೀ ದೊಡ್ಡ ಉಪಗ್ರಹವಾಗಿದ್ದು, ಈ ಹಿಂದೆ ಸಂಪರ್ವ ಸಂವಹನಕ್ಕಾಗಿ ಉಡಾವಣೆ ಮಾಡಲಾಗಿದ್ದ ಜಿಸ್ಯಾಟ್ ಸರಣಿಯ ಅತೀ ದೊಡ್ಡ ಉಪಗ್ರಹವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT