ದೇಶ

ಎನ್ ಡಿಟಿವಿ ಪ್ರಕರಣ: ತುರ್ತು ಪರಿಸ್ಥಿತಿ ರೀತಿಯ ವಾತಾವರಣ ಇದೆ ಎಂದ ಹಿರಿಯ ಪತ್ರಕರ್ತರು

Srinivas Rao BV
ನವದೆಹಲಿ: ಎನ್ ಡಿಟಿವಿ ಸ್ಥಾಪಕ ಪ್ರಣಯ್ ರಾಯ್ ಮೇಲಿನ ಸಿಬಿಐ ದಾಳಿ ಪ್ರಕರಣವನ್ನು ಹಿರಿಯ ಪತ್ರಕರ್ತರು ವಿರೋಧಿಸಿದ್ದು, ಮಾಧ್ಯಮಗಳ ಧ್ವನಿ ಅಡಗಿಸುವ ತಂತ್ರ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. 
ಪ್ರಣಯ್ ರಾಯ್ ಮೇಲಿನ ಸಿಬಿಐ ದಾಳಿ ನಡೆದ ಬೆನ್ನಲ್ಲೇ ದೆಹಲಿ ಪ್ರೆಸ್ ನಲ್ಲಿ ಕಹಿರಿಯ ಪತ್ರಕರ್ತರಾದ ಕುಲ್ ದೀಪ್ ನಯ್ಯರ್, ಅರುಣ್ ಶೌರಿ, ಹೆಚ್ ಕೆ ದುವಾ, ಎಸ್ ನಿಹಾಲ್ ಸಿಂಗ್ ಸೇರಿದಂತೆ ಹಲವು ಹಿರಿಯ ಪತ್ರಕರ್ತರು ಸೇರಿ ಮಾತನಾಡಿದ್ದಾರೆ. ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಪತ್ರಕರ್ತ ಅರುಣ್ ಶೌರಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಮಾಧ್ಯಮಗಳನ್ನು ಎರಡು ವಿಧದಿಂದ ನಿಯಂತ್ರಿಸುತ್ತಿದೆ ಒಂದು ಜಾಹಿರಾತು ರೂಪದಲ್ಲಿ ಲಂಚ ನೀಡಿ ನಿಯಂತ್ರಿಸುತ್ತಿದ್ದರೆ, ಭಯ ಮೂಡಿಸುತ್ತಿರುವುದು ಮತ್ತೊಂದು ರೀತಿಯ ನಿಯಂತ್ರಣವಾಗಿದೆ ಎಂದು ಆರೋಪಿಸಿದ್ದಾರೆ. ಈಗ ಕೇಂದ್ರ ಸರ್ಕಾರ ಮೂರನೇ ಮಾದರಿಯನ್ನು ಪ್ರಾರಂಭಿಸಿದ್ದು, ಅದಕ್ಕೆ ಎನ್ ಡಿ ಟಿವಿ ಉತ್ತಮ ಉದಾಹರಣೆ ಎಂದು ಅರುಣ್ ಶೌರಿ ಹೇಳಿದ್ದಾರೆ. 
ಕೇಂದ್ರ ಸರ್ಕಾರದ ಈ ನಡೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದೆ, ಮಾಧ್ಯಮಗಳ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯಲಿದೆ ಎಂದು ಅರುಣ್ ಶೌರಿ ಅಭಿಪ್ರಾಯಪಟ್ಟಿದ್ದಾರೆ. 
SCROLL FOR NEXT