ಶಿವರಾಜ್ ಸಿಂಗ್ ಚೌಹ್ವಾಣ್ 
ದೇಶ

ಜೂ.14 ರಂದು ಮಂಡಸೌರ್ ಗೆ ಭೇಟಿ ನೀಡಲಿರುವ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್

ರೈತರ ಪ್ರತಿಭಟನೆ, ಗೋಲಿಬಾರ್ ನಿಂದಾಗಿ ಗಲಭೆ ಉಂಟಾಗಿದ್ದ ಮಧ್ಯಪ್ರದೇಶದ ಮಂಡಸೌರ್ ಗೆ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ಜೂ.14 ರಂದು ಭೇಟಿ ನೀಡಲಿದ್ದಾರೆ.

ಭೋಪಾಲ್: ರೈತರ ಪ್ರತಿಭಟನೆ, ಗೋಲಿಬಾರ್ ನಿಂದಾಗಿ ಗಲಭೆ ಉಂಟಾಗಿದ್ದ ಮಧ್ಯಪ್ರದೇಶದ ಮಂಡಸೌರ್ ಗೆ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ಜೂ.14 ರಂದು ಭೇಟಿ ನೀಡಲಿದ್ದಾರೆ.  


ಸರ್ಕಾರಿ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಮಂಡಸೌರ್ ಗೆ ಭೇಟಿ ನೀಡಲಿರುವ ಶಿವರಾಜ್ ಸಿಂಗ್ ರೈತ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಮಂಡಸೌರ್ ನಲ್ಲಿ ಉಂಟಾಗಿದ್ದ ಪ್ರಕ್ಷುಬ್ಧ ವಾತಾವರಣವನ್ನು ನಿಯಂತ್ರಣಕ್ಕೆ ತರಲು ಉಪವಾಸ ನಿರಶನ ಆರಂಭಿಸಿದ್ದ ಶಿವರಾಜ್ ಸಿಂಗ್ ಚೌಹ್ವಾಣ್ ಜೂ.11 ರಂದು ಉಪವಾಸವನ್ನು ಅಂತ್ಯಗೊಳಿಸಿದ್ದರು.

ರೈತರ ಸಾಲ ಮನ್ನ ಮಾಡಲು ಆಗ್ರಹಿಸಿ ಜೂ.1 ರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಮಂಡಸೌರ್ ನಲ್ಲಿ ಗೋಲಿಬಾರ್ ನಡೆದು ರೈತರು ಸಾವನ್ನಪ್ಪಿದ್ದರು. ಪರಿಣಾಮವಾಗಿ ರೈತರ ಪ್ರತಿಭಟನೆ ಗಲಭೆಗೆ ತಿರುಗಿತ್ತು. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಜೂ.14 ರಂದು ಮಂಡಸೌರ್ ಗೆ ತೆರಳಲಿರುವ ಸಿಎಂ ಚೌಹ್ವಾಣ್ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran conflict: ರಿಯಾದ್‌ ಅಮೆರಿಕಾ ರಾಯಭಾರಿ ಕಚೇರಿ ಮೇಲೆ ಡ್ರೋನ್ ದಾಳಿ: ಸ್ಫೋಟದ ಶಬ್ಧಕ್ಕೆ ಬೆಚ್ಚಿಬಿದ್ದ ಸೌದಿ; ಶೀಘ್ರದಲ್ಲೇ ತಕ್ಕ ಪ್ರತಿಕ್ರಿಯೆ- ಟ್ರಂಪ್ ಎಚ್ಚರಿಕೆ

ಇರಾಕ್‌ನಲ್ಲಿ US ಪಡೆ ತಂಗಿದ್ದ ಹೋಟೆಲ್ ಮೇಲೆ ಇರಾನ್ ಬೆಂಬಲಿತ ಗುಂಪು ದಾಳಿ!

ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ್ದೇಕೆ?: ಕಾರಣ ನೀಡಿದ Donald Trump

US-Israel-Iran War: ಕನ್ನಡಿಗರ ಸುರಕ್ಷಿತ ವಾಪಸಾತಿಗೆ ಕ್ರಮ; ಕೇಂದ್ರ ಸರ್ಕಾರ ಭರವಸೆ

West Asia conflict: ಇರಾನ್ ಮೇಲಿನ ಯುದ್ಧ ಇನ್ನು 4-5 ವಾರಗಳ ಕಾಲ ನಡೆಯಲಿದೆ- ಡೊನಾಲ್ಡ್ ಟ್ರಂಪ್

SCROLL FOR NEXT