ರಾಷ್ಟ್ರಗೀತೆಗೆ ಸಿಪಿಐ(ಎಂ) ವಿದ್ಯಾರ್ಥಿಗಳಿಂದ ಅಪಮಾನ! 
ದೇಶ

ಸಿನಿಮಾ ಥಿಯೇಟರ್ ನಲ್ಲಿ ಸೆಕ್ಸ್ ವ್ಯಂಗ್ಯಚಿತ್ರ, ರಾಷ್ಟ್ರಗೀತೆಗೆ ಸಿಪಿಐ(ಎಂ) ವಿದ್ಯಾರ್ಥಿಗಳಿಂದ ಅಪಮಾನ!

ಸಿನಿಮಾ ಥಿಯೇಟರ್ ನಲ್ಲಿ ರಾಷ್ಟ್ರಗೀತೆ ಮೊಳಗುತ್ತಿರುವಾಗ ಸೀಟಿನ ಹಿಂಬದಿಯಲ್ಲಿ ಲೈಂಗಿಕ ಕ್ರಿಯೆ(ಸೆಕ್ಸ್) ನಡೆಸುತ್ತಿರುವ ವ್ಯಂಗ್ಯ ಚಿತ್ರವನ್ನು ಪ್ರಕಟಿಸಿ ಸಿಪಿಐ(ಎಂ) ರಾಷ್ಟ್ರಗೀತೆಗೆ ಅಪಮಾನ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.

ಕಣ್ಣೂರು: ಸಿನಿಮಾ ಥಿಯೇಟರ್ ನಲ್ಲಿ ರಾಷ್ಟ್ರಗೀತೆ ಮೊಳಗುತ್ತಿರುವಾಗ ಸೀಟಿನ ಹಿಂಬದಿಯಲ್ಲಿ ಲೈಂಗಿಕ ಕ್ರಿಯೆ(ಸೆಕ್ಸ್) ನಡೆಸುತ್ತಿರುವ ವ್ಯಂಗ್ಯ ಚಿತ್ರವನ್ನು ಪ್ರಕಟಿಸಿ ಸಿಪಿಐ(ಎಂ) ರಾಷ್ಟ್ರಗೀತೆಗೆ ಅಪಮಾನ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ. 
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಓದಿದ್ದ ತಲಸ್ಸೆರಿಯ ಸರ್ಕಾರಿ  ಬ್ರೆನ್ನನ್ ಕಾಲೇಜ್ ನ ವಾರ್ಷಿಕ ಪತ್ರಿಕೆಯಲ್ಲಿ ರಾಷ್ಟ್ರಗೀತೆಗೆ ಅಪಮಾನ ಮಾಡುವ ವ್ಯಂಗ್ಯ ಚಿತ್ರವನ್ನು ಸಿಪಿಐ(ಎಂ) ನ ವಿದ್ಯಾರ್ಥಿ ಸಂಘಟನೆ ಎಸ್ಎಫ್ಐ ಪ್ರಕಟಿಸಿದೆ. 
ಕಾಲೇಜಿನ 125 ನೇ ವಾರ್ಷಿಕೋತ್ಸವದ ಆಚರಣೆಯ ಅಂಗವಾಗಿ "ಪೆಲ್ಲೆಟ್" ಶೀರ್ಷಿಕೆಯಡಿ ವಿದ್ಯಾರ್ಥಿ ಸಂಘಟನೆ ಪತ್ರಿಕೆಯನ್ನು ಹೊರತಂದಿದ್ದು, ಥಿಯೇಟರ್ ನಲ್ಲಿ ಚಲನ ಚಿತ್ರ ಪ್ರಸಾರವಾಗುವುದಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗುವ ವೇಳೆ ಸೀಟಿನ ಹಿಂಬದಿಯಲ್ಲಿ ಜೋಡಿಯೊಂದು ಲೈಂಗಿಕ ಕ್ರಿಯೆಯಲ್ಲಿ ನಿರತವಾಗಿರುವ ವ್ಯಂಗ್ಯ ಚಿತ್ರವನ್ನು ಪ್ರಕಟಿಸಿದೆ. ಸಿಪಿಐ(ಎಂ) ನ ನಡೆಗೆ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಎಸ್ಎಫ್ಐ ಅಗ್ಗದ ರಾಜಕೀಯ ಪ್ರಚಾರ ಪಡೆಯಲು ಕಾಲೇಜಿನ ಪತ್ರಿಕೆಯನ್ನು ಬಳಸಿಕೊಂಡಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಆಕ್ರೋಶ ವ್ಯಕ್ತಪಡಿಸಿದೆ. 
ಮ್ಯಾಗಜೀನ್ ನಲ್ಲಿ ಪ್ರಕಟವಾದ ವ್ಯಂಗ್ಯ ಚಿತ್ರಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕಾಲೇಜು ಪತ್ರಿಕೆಯ ಪ್ರಸಾರವನ್ನು ತಡೆ ಹಿಡಿದಿದ್ದು, ಪ್ರಾಧ್ಯಾಪಕರ ಸಭೆ ಕರೆದಿದೆ. ಇಷ್ಟೆಲ್ಲಾ ಆದರೂ ಎಸ್ಎಫ್ ಐ ಮಾತ್ರ  ತನ್ನ ಧೋರಣೆಯನ್ನು ಸಮರ್ಥಿಸಿಕೊಂಡಿದ್ದು, ಒಳ್ಳೆಯ ಉದ್ದೇಶದಿಂದ ಪತ್ರಿಕೆ ಪ್ರಕಟಿಸಲಾಗಿದೆ ಎಂದು ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್